ವಯನಾಡು ಪ್ರವಾಹ: ಬೇರೆಯವರ ಮಗುವನ್ನು ರಕ್ಷಿಸಲು ಹೋಗಿ ತನ್ನ ಮಗಳನ್ನೇ ಕಳೆದುಕೊಂಡ ತಾಯಿ..!
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದು ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯಾರದ್ದೋ ಮಗುವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಜಿತಾ ಎಂಬ ಮಹಿಳೆ ತನ್ನ ಸ್ವಂತ ಮಗಳನ್ನು ಕಳೆದುಕೊಂಡ ದಾರುಣ ಘಟನೆ ನಡೆದಿದೆ.
ಪ್ರವಾಹದ ನೀರಿನಲ್ಲಿ ಸಿಲುಕಿದ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಪ್ರಜಿತಾ ಅವರ 10 ವರ್ಷದ ಮಗಳಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಪ್ರಜಿತಾ ಮನೆಯಲ್ಲಿ ಮಲಗಿದ್ದಾಗ ದೊಡ್ಡ ಶಬ್ದ ಕೇಳಿದೆ. ಇದ್ದಕ್ಕಿದ್ದಂತೆ ನೀರು ಮನೆಯ ಒಳನುಗ್ಗಿದೆ. ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಪ್ರವಾಹದ ನೀರು ಆವರಿಸಿಯಾಗಿತ್ತು. ಆ ವೇಳೆ ನೀರಿನಲ್ಲಿ ತೇಲುತ್ತಿದ್ದ ಮತ್ತೊಂದು ಮಗುವನ್ನು ರಕ್ಷಿಸುವ ವೇಳೆ ಪ್ರಜಿತಾ ಜೊತೆಗಿದ್ದ ಅವರ ಪುತ್ರಿ ಕಾಲು ಜಾರಿ ಬಿದ್ದಿದ್ದು. ಆಗ ಆಕೆಗೆ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ.