ಅರಿಯಡ್ಕ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ರಾಜೇಶ್ ಕೆ.ಮಯೂರ ಆಯ್ಕೆ
ಪುತ್ತೂರು: ಅರಿಯಡ್ಕ ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ರಾಜೇಶ್ ಕೆ.ಮಯೂರ ಆಯ್ಕೆಯಾಗಿದ್ದಾರೆ.
ಇವರು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿಯಾಗಿ, ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆ ಮಜ್ಜಾರಡ್ಕ ಇದರ ಅಧ್ಯಕ್ಷರಾಗಿ, ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡ ಮಜ್ಜಾರಡ್ಕ ಇದರ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಾಲೂಕು ಮತ್ತು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತಗೊಂಡಿದ್ದಾರೆ.