ಶವಪೆಟ್ಟಿಗೆಯಲ್ಲಿ ಮಧುಮಗನನ್ನು ಕರೆತಂದ ಸ್ನೇಹಿತರು!
ಯಾರಾದರೂ ತಮ್ಮ ಸ್ವಂತ ಮದುವೆಯಲ್ಲಿ ಶವಪೆಟ್ಟಿಗೆಯಲ್ಲಿ ಮದುವೆ ಮಂಟಪಕ್ಕೆ ಶವ ಪೆಟ್ಟಿಗೆಯಲ್ಲಿ ಪ್ರವೇಶವನ್ನು ಮಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ?ಹೌದು,
ಮದುವೆ ದಿನ ವಧು-ವರರು ವಿಶೇಷ ರೀತಿಯಲ್ಲಿ ಮಂಟಪಕ್ಕೆ ಬರುವುದು ಸಾಮಾನ್ಯ.

ವರನು ತನ್ನ ಮದುವೆಯ ದಿನದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದಾನೆ.ಏಕೆಂದರೆ ಅವನು ಮದುವೆ ದಿನದಂದು ವಿಚಿತ್ರವಾದ ಸಾಹಸ ಅಥವಾ ತಮಾಷೆಯನ್ನು ಮಾಡಿದ್ದಾನೆ. ಅವನು ನಿಜವಾದ ಶವಪೆಟ್ಟಿಗೆಯಲ್ಲಿ ತನ್ನ ಮದುವೆಗೆ ಪ್ರವೇಶವನ್ನು ಮಾಡಿದನು ಮತ್ತು ಅವನ ಆತ್ಮೀಯ ಸ್ನೇಹಿತರು ಶವಪೆಟ್ಟಿಗೆಯನ್ನು ಹೊತ್ತುಕೊಂಡು ಬಂದಿದ್ದಾರೆ.
ಮದುವೆ ಹೆಣ್ಣು ಸಿಂಗಾರಗೊಂಡು ವರನಿಗಾಗಿ ಕಾಯುತ್ತಿದ್ದಳು.ಆ ವೇಳೆ ಕಾರೊಂದು ಬಂದು ಅಲ್ಲಿ ನಿಂತಿತು. ಕಾರಿನಿಂದಿಳಿದ ಕೆಲವರು ಹಿಂಬದಿಯಿಂದ ಶವ ಪೆಟ್ಟಿಗೆಯನ್ನು ಹೊರ ತೆಗೆದು ನಾಲ್ಕೈದು ಮಂದಿ ಅದನ್ನು ಮಂಟಪಕ್ಕೆ ಹೊತ್ತು ತಂದಿದ್ದಾರೆ.ಬಳಿಕ ವರನು ಶವ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾನೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟೀಕೆಗೂ ಕಾರಣವಾಗಿದೆ. ಎಲ್ಲಿ ನಡೆದದ್ದು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.