ನೆಲ್ಯಾಡಿ: ಸ್ಕೂಟರ್ ಡಿಕ್ಕಿ : ತಾಯಿ ಮಗು ಸೇರಿ ಮೂವರಿಗೆ ಗಾಯ
ನೆಲ್ಯಾಡಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರರಾದ ತಾಯಿ, ಮಗು ಸೇರಿ ಮೂವರು ಗಾಯಗೊಂಡಿರುವ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಕೌಕ್ರಾಡಿ ಗ್ರಾಮದ ಪೆಲತಿಂಜ ನಿವಾಸಿ ಅಂಬೋಡಿರವರು ಕೊಕ್ಕಡ ವಿಜೇತ್ ಹೋಟೆಲ್ ಪಕ್ಕ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಕೊಕ್ಕಡದಿಂದ ಅರಸಿನಮಕ್ಕಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ 2 ದ್ವಿಚಕ್ರ ವಾಹನ ಸವಾರ ಗುಣಶೀಲ, ಸಹ ಸವಾರರಾಗಿದ್ದ ಅವರ ಮಗ ದುಷ್ಯಂತ್ ಮತ್ತು ರಸ್ತೆ ಬದಿ ನಿಂತುಕೊಂಡಿದ್ದ ಅಂಬೋಡಿಯವರು ಗಾಯಗೊಂಡಿದ್ದಾರೆ.
ಗಾಯಾಳು ಅಂಬೋಡಿಯವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಗುಣಶೀಲ ಮತ್ತು ದುಷ್ಯಂತ್‌ರವರು ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.