ಶ್ರೀಲಂಕಾದಲ್ಲಿ ಮಾಂಸ ನಿಷೇಧ..!
ಉತ್ತರ ಮತ್ತು ಪೂರ್ವ ಪ್ರಾಂತದಲ್ಲಿ ಅಸಾಮಾನ್ಯ ಚಳಿಯ ವಾತಾವರಣದಿಂದ ಕಳೆದ 2 ದಿನದಿಂದ ಬೃಹತ್ ಪ್ರಮಾಣದಲ್ಲಿ ದನಗಳು ಹಾಗೂ ಮೇಕೆಗಳು ಸತ್ತಿರುವುದರಿಂದ ಜಿಲ್ಲಾ ಮತ್ತು ಪ್ರಾಂತೀಯ ಹಂತದಲ್ಲಿ ಗೋಮಾಂಸ ಹಾಗೂ ಮಾಂಸ ಸಾಗಣೆಯನ್ನು ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಹವಾಮಾನ ವೈಪರೀತ್ಯದಿಂದ ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಪ್ರಾಂತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಸು ಮತ್ತು ಮೇಕೆಗಳು ಸಾವಿಗೀಡಾಗಿದ್ದು ಮೃತಪಟ್ಟ ಪ್ರಾಣಿಗಳ ಮಾದರಿಯನ್ನು ಪಶುವೈದ್ಯಕೀಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಸಾರ್ವಜನಿಕ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮಾಂಸ ಸಾಗಣೆ ನಿಷೇಧಕ್ಕೆ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.