ಕರ್ನೂರು- ಗಾಳಿಮುಖ ರಸ್ತೆ ಅಭಿವೃದ್ಧಿಗೊಳಿಸದಿದ್ದರೆ ಪ್ರತಿಭಟನೆ: ಕರ್ನೂರು ಯೂನಿಟ್ ಸ್ಟೂಡೆಂಟ್ಸ್ ಕೌನ್ಸಿಲ್’ನಲ್ಲಿ ತೀರ್ಮಾನ
ಪುತ್ತೂರು: ಬದಲಾಗುತ್ತಾ ಬಂದ ಸರ್ಕಾರಗಳು ಅಲ್ಪ ಸ್ವಲ್ಪ ಅನುದಾನವನ್ನು ನೀಡಿ ತೇಪೆ ಹಾಕುತ್ತಿರುವ ಕರ್ನೂರು- ಗಾಳಿಮುಖ ರಸ್ತೆ ಅಭಿವೃದ್ಧಿ ಕಾಮಗಾರಿ ಆಗದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಊರವರನ್ನು ಒಗ್ಗೂಡಿಸಿಕೊಂಡು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಕರ್ನೂರು ಯೂನಿಟ್ ಸ್ಟೂಡೆಂಟ್ಸ್ ಕೌನ್ಸಿಲ್ ನಲ್ಲಿ ತೀರ್ಮಾನಿಸಲಾಯಿತು.
ಕಳೆದ ಒಂದು ವರ್ಷದ ಚಟುವಟಿಕೆಯ ವರದಿಯನ್ನು ಪ್ರಸ್ತುತಪಡಿಸುವುದರ ಮೂಲಕ 2022 ರ ಸಾಂಸ್ಥಿಕ ವರ್ಷಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ ಅಹಮದ್ ಫರ್ಜಾನ್ (ಅಧ್ಯಕ್ಷರು)ಮನ್ಸೂರ್ (ಪ್ರಧಾನ ಕಾರ್ಯದರ್ಶಿ)ಸವಾದ್ ಇಬ್ರಾಹಿಂ (ಕೋಶಾಧಿಕಾರಿ)ಯಾಗಿ ಆಯ್ಕೆಯಾದರು. 9 ಜನರನ್ನು ಒಳಗೊಂಡ ಕಾರ್ಯದರ್ಶಿಗಳನ್ನ ಆಯ್ಕೆ ಮಾಡಲಾಯಿತು.
ಯೂನಿಟ್ ಕಂಟ್ರೋಲರ್ ಅಶ್ರಫ್ ಪಳ್ಳತ್ತೂರು ನೇತೃತ್ವದಲ್ಲಿ ಸೆಕ್ಟರ್ ಅಧ್ಯಕ್ಷ ಶಾಹುಲ್ ಹಮೀದ್ ಸಅದಿ ಉದ್ಘಾಟನೆ ಮಾಡಿದರು. Cಕಾರ್ಯಕ್ರಮದಲ್ಲಿ ಸಹದ್ ಕರ್ನೂರ್ ರಿಟೇನಿಂಗ್ ಆಫೀಸರಾಗಿ ಕಾರ್ಯನಿರ್ವಹಿಸಿದರು.ಫೈಸಲ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.