ರಾಷ್ಟ್ರೀಯ

70 ವರ್ಷದ ವೃದ್ಧನನ್ನು ಮದುವೆಯಾದ 19 ವರ್ಷದ ಯುವತಿ..!



ಪ್ರೀತಿ ಕಣ್ಣಿಲ್ಲ ಅಂತಾರೆ.. ಏಕೆಂದರೆ ಒಮ್ಮೆ ಯುವತಿ ಅಥವಾ ಯುವಕ ಪ್ರೀತಿಯಲ್ಲಿ ಬಿದ್ದರೇ ಅವರಿಗೆ ಬಣ್ಣ, ಜಾತಿ, ದೇಶ, ಪ್ರದೇಶಗಳ ಬೇಧವಿಲ್ಲದೇ ಒಂದಾಗುತ್ತಾರೆ. ತಾವು ಇಷ್ಟ ಪಟ್ಟ ವ್ಯಕ್ತಿಗಾಗಿ ಸಮಾಜವನ್ನು ಎದುರಿಸಿ, ಮನೆಯಿಂದ ಹೊರ ಬಂದಾದರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಂತಹದ್ದೇ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, 19 ವರ್ಷದ ಯುವತಿಯೋರ್ವಳು 70 ವರ್ಷದ ಪುರುಷನನ್ನು ಮದ್ವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.

ಶುಮೈಲಾ (19), ಲಿಯಾಖತ್ ಅಲಿ (70) ಒಮ್ಮೆ ಮಾರ್ನಿಂಗ್ ವಾಕ್ ಮಾಡ್ತಿದ್ದ ವೇಳೆ ಭೇಟಿಯಾಗಿದ್ದರು. ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಪ್ರೀತಿಯಲ್ಲಿ ಬಿದ್ದಿದ್ದರು. ಕೆಲ ಸಮಯದಲ್ಲೇ ಇಬ್ಬರ ಪರಿಚಯ ಪ್ರೀತಿಯಾಗಿ ಮಾರ್ಪಡಾಗಿತ್ತು. ಇದರ ಬೆನ್ನಲ್ಲೇ ವಯಸ್ಸಿನ ಅಂತರವನ್ನು ಮೀರಿ ಇಬ್ಬರು ಮದ್ವೆಯಾಗಿದ್ದಾರೆ.

ಅಂದಹಾಗೇ, ಮಾರ್ನಿಂಗ್ ವಾಕ್ ವೇಳೆ ಲಿಯಾಖತ್ ಹಾಡೊಂದು ಹಾಡುತ್ತಾ ಹೋಗ್ತಿದ್ದ ವೇಳೆ, ಶುಮೈಲಾ ಆತನ ಗಾಯನಕ್ಕೆ ಫಿದಾ ಆಗಿ ಪ್ರೀತಿಯ ಬಲೆಗೆ ಬಿದ್ದಿದ್ದಳು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!