ಸುಳ್ಯ: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಬಗ್ಗೆ ಮಾಹಿತಿ
ಸುಳ್ಯ: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಕುಟುಂಬಕ್ಕೆ ರೂ 5 ಲಕ್ಷದವರೆಗೆ ಸುಮಾರು 1650 ಖಾಯಿಲೆಗಳಿಗೆ ಸರಕಾರದಿಂದ ರಚಿಸಲ್ಪಟ್ಟ ಯಶಸ್ವಿನಿ ಟ್ರಸ್ಟ್ ಮುಖಾಂತರ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ದೊರಕುವ ನಗದುರಹಿತ ಆರೋಗ್ಯ ರಕ್ಷಣಾ ವ್ಯವಸ್ಥೆಯಾಗಿದ್ದು ಈ ಯೋಜನೆಯನ್ನು ನಮ್ಮ ಸಂಸ್ಥೆಯ ವತಿಯಿಂದ ಸಾರ್ವಜನಿಕ ಸೇವೆಗಾಗಿ ಆಯೋಜಿಸಲಾಗಿದೆ.
ಇದರ ಸದುಪಯೋಗವನ್ನು ಪಡೆಯಲು ಫಲಾನುಭವಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯನಾಗಿರಬೇಕು.
ಹೊಸ ಸದಸ್ಯರಾಗಿದ್ದಲ್ಲಿ ಸದಸ್ಯರಾಗಿ ಕನಿಷ್ಟ 3 ತಿಂಗಳು ಕಳೆದಿರಬೇಕು.
ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ವಂತಿಗೆ ಮೊತ್ತ
ನಗರ ರೂ 1000/-
ಗ್ರಾಮೀಣ ರೂ 500 /-
ಕುಟುಂಬದಲ್ಲಿ 4 ಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಪ್ರತಿ ವ್ಯಕ್ತಿಗೆ 20% ಹೆಚ್ಚುವರಿ ವಂತಿಗೆ ಪಾವತಿಸಬೇಕಾಗುತ್ತದೆ (ನಗರ 200, ಗ್ರಾಮೀಣ 100).
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಕ್ಕೆ
ವಂತಿಗೆ ಇಲ್ಲದೆ ಸಂಪೂರ್ಣ ಉಚಿತ ವಾಗಿರುತ್ತದೆ.
ಪ್ರತೀ ಸದಸ್ಯನ rd ಸಂಖ್ಯೆ ಇರುವ ಜಾತಿ ಸರ್ಟಿಫಿಕೇಟ್ ಅಗತ್ಯವಿರುತ್ತದೆ.
ಯಶಸ್ವಿನಿ ನೋಂದಣಿ ಅವಧಿ
ನವಂಬರ್ 1 ರಿಂದ ಡಿಸಂಬರ್ ತಿಂಗಳ ಒಳಗಾಗಿರುತ್ತದೆ.
ಫಲಾನುಭವಿಗೆ ಯೋಜನೆ ಜಾರಿಯಾಗುವ ಅವಧಿ
ಜನವರಿ 1, 2023 ರಿಂದ ಡಿಸೆಂಬರ್ 31 ವರೆಗೆ ಇರುತ್ತದೆ.
ಜನರಲ್ ವಾರ್ಡಿನಲ್ಲಿ ದಾಖಲಾಗಬೇಕು.
ಬೇರೆ ವಿಮೆ ಹೊಂದಿರಬಾರದು. ಹಾಗೂ ಹೆಚ್ಚಿನ ವಿವರಗಳಿಗೆ ಸಂಸ್ಥೆಯನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಹಾಗೂ ಕಾರ್ಯನಿರ್ವಹಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುಸರಿಸಬೇಕಾದ ಸಾಮಾನ್ಯ ನಿಯಮಗಳು ಈ ಕೆಳಗಿನಂತೆ ಇದ್ದು ಯೋಜನೆಗೆ ಒಳಪಡುವ ವ್ಯಕ್ತಿ ಸರಕಾರಿ ಅಥವಾ ಖಾಸಗಿ ಉದ್ಯೋಗಿಯಾಗಿರಬಾರದು.
ಯಶಸ್ವಿನಿ ಟ್ರಸ್ಟ್ ನಲ್ಲಿ ನೋಂದಾಯಿತ ನೆಟ್ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕು.
ಫಲಾನುಭವಿ ಆಸ್ಪತ್ರೆಗೆ ದಾಖಲಾಗುವ ಮುಂಚೆ ತನ್ನ ಖಾಯಿಲೆಗೆ ಈ ಯೋಜನೆ ಅನ್ವಯ ಆಗುವುದನ್ನು ಆಸ್ಪತ್ರೆಯವರಲ್ಲಿ ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು.