ಬೆಂಗಳೂರು: ಶಾಲೆಯಲ್ಲಿ ಬೈದಿದ್ದಕ್ಕೆ ಬೇಸರ: ಅಪಾರ್ಟ್‌ಮೆಂಟ್ ನ 10ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ಅಪಾರ್ಟ್‌ಮೆಂಟ್ವೊಂದರ 10ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗವಾರ ಬಳಿ ವರದಿಯಾಗಿದೆ.

ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮೊಹೀನ್ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಖಾಸಗಿ ಶಾಲೆಯ ಸಿಬ್ಬಂದಿ ಬೈದಿದ್ದರಿಂದ ಮೊಹೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ. ಮತ್ತೊಂದೆಡೆ, ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ವಿರುದ್ಧವೂ ಬೇಜವಾಬ್ದಾರಿ ಕಾರ್ಯ ಆರೋಪ ಕೇಳಿ ಬರುತ್ತಿದೆ. ವಿದ್ಯಾರ್ಥಿಯನ್ನು 10ನೇ ಮಹಡಿವರೆಗೆ ತೆರಳಲು ಅವಕಾಶ ನೀಡಿದ್ದೇಕೆ ಎಂದು ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.
