ರಾಷ್ಟ್ರೀಯ

ನೇಪಾಳದಲ್ಲಿ ಭೂಕಂಪ: ದಿಲ್ಲಿಯಲ್ಲೂ ಕಂಪಿಸಿದ ಭೂಮಿ



ಹೊಸದಿಲ್ಲಿ: ಬುಧವಾರ ನಸುಕಿನಲ್ಲಿ ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ನೇಪಾಳದಲ್ಲಿ ಸಂಭವಿಸಿದೆ. ದೋಟಿ ಜಿಲ್ಲೆಯಲ್ಲಿ ಭೂಕಂಪದ ಕಾರಣದಿಂದ ಮನೆ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಸುಕಿನ 2 ಗಂಟೆ ಸುಮಾರಿಗೆ ದಿಲ್ಲಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡಾ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪ ನೆಲಮಟ್ಟದಿಂದ ಸುಮಾರು 10 ಕಿ.ಮೀ ಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.

Leave a Reply

Your email address will not be published. Required fields are marked *

error: Content is protected !!