ರಾಜ್ಯ

ಭಟ್ಕಳ: ಬೈಕ್ ಅಪಘಾತದಿಂದ ಹೆದರಿದ ಬಾಲಕ ಹೃದಯಾಘಾತದಿಂದ ಮೃತ್ಯು



ಭಟ್ಕಳ: ಬೈಕ್ ಅಪಘಾತದಿಂದ ಹೆದರಿಕೊಂಡ ಬಾಲಕನೊಬ್ಬ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಅ.5ರಂದು ರಾತ್ರಿ ವರದಿಯಾಗಿದೆ.

ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ಲಾ ಆಫ್ರೀಕಾ (14) ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.

ಅ.5ರಂದು ರಾತ್ರಿ 7ರ ಸುಮಾರಿಗೆ ಅಬ್ದುಲ್ಲಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಬೈಕ್ ತಾಗಿದೆ ಎನ್ನಲಾಗಿದ್ದು ಈ ಸಂದರ್ಭ ಅಬ್ದುಲ್ಲಾ ಆಫ್ರೀಕಾ ಬೈಕ್‌ ಸಮೇತ ಬಿದ್ದಿದ್ದು, ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದರು. ಇದರಿಂದ ಹೆದರಿಕೊಂಡ ಅಬ್ದುಲ್ಲಾ ಅಲ್ಲಿಯೆ ಕುಸಿದ್ದು ಬಿದ್ದಿದ್ದಾನೆ. ಈ ವೇಳೆ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!