ಕರಾವಳಿಕ್ರೈಂ

ಬೆಳ್ಳಾರೆ|ವಾಟ್ಸಾಪ್ ಗ್ರೂಪಿನಲ್ಲಿ ಕೋಮು ದ್ವೇಷ ಸಂದೇಶ: ಓರ್ವನ ವಿರುದ್ದ ಪ್ರಕರಣ ದಾಖಲು

ಮಂಗಳೂರು: ವಾಟ್ಸ್ ಅಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟುಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

Oplus_0

ಮಂಗಳೂರು ನ್ಯೂಸ್ 24X7 ಎಂಬ ಹೆಸರಿನ ವಾಟ್ಸ್ ಅಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ  ವೈರತ್ವವನ್ನು ಉಂಟು ಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಈ ಸಂದೇಶದಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ, ಸದ್ರಿ ಸಂದೇಶವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಸಾರ ಮಾಡಿದಾತನ ವಿರುದ್ಧ ದಿನಾಂಕ – 07.06.2025 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!