ಜೂ.20ರ ಬಳಿಕ ಪುತ್ತೂರಿಗೆ
500 ಮಂದಿ ಚಾಲಕ, ನಿರ್ವಾಹಕರ ನೇಮಕ: ಶಾಸಕ ಅಶೋಕ್ ರೈ
ಪುತ್ತೂರು: ಜೂ.20ರ ಬಳಿಕ ಪುತ್ತೂರು ಕೆಎಸ್ ಆರ್ ಟಿಸಿಗೆ 500 ಮಂದಿ ಚಾಲಕ ಮತ್ತು ನಿರ್ವಾಹಕರನ್ನು ನೇಮಕ ಮಾಡಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದರು.

ವಿಟ್ಲ ಭಾಗಕ್ಕೆ ಸರಕಾರಿ ಬಸ್ಸುಗಳ ಕೊರತೆ ಇರುವ ಬಗ್ಗೆ ಪಕ್ಷದ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಾಗ ಸ್ಪಷ್ಟನೆ ನೀಡಿದ ಶಾಸಕರು 500 ಮಂದಿ ನೇಮಕವಾದ ಬಳಿಕ ಎಲ್ಲೆಲ್ಲಾ ಬಸ್ಸುಗಳ ಓಡಾಟದ ಕೊರತೆ ಇದೆಯೋ ಅಲ್ಲೆಲ್ಲಾ ಬಸ್ಸುಗಳು ಬರಲಿದೆ. ಬಸ್ಸುಗಳ ಕೊರತೆ ಇಲ್ಲ ಚಾಲಕ ಮತ್ತು ನಿರ್ವಾಹಕರ ಕೊರತೆ ಇತ್ತು, ಅದು ಜೂ.20ಕ್ಕೆ ಪರಿಹಾರವಾಗಲಿದೆ ಎಂದು ಶಾಸಕರು ತಿಳಿಸಿದರು.