Uncategorizedಕರಾವಳಿ

ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಎಸ್ ಕೆ ಎಸ್ ಎಸ್ ಎಫ್ ಕಾರ್ಯಕ್ರಮ ಪೂರಕ -ನೂರುದ್ದೀನ್ ಸಾಲ್ಮರ



ಎಸ್ ಕೆ ಎಸ್ ಎಸ್ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ, ಮಾದಕ ದ್ರವ್ಯದ ವಿರುದ್ಧ ಜನಜಾಗೃತಿಯನ್ನು ಮೂಡಿಸಲು ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮನ್ನು,ಎಸ್ ಕೆ ಎಸ್ ಎಸ್ ಎಫ್, ಹಮ್ಮಿಕೊಂಡಿದೆ. ಇಂದು ಜಿಲ್ಲೆಯ 32 ಕೇಂದ್ರಗಳಲ್ಲಿ,ಸಂಜೆ 4ಕ್ಕೆ, ಏಕಕಾಲದಲ್ಲಿ ‘ಜನ ಸಂಚಲನ’ ಎಂಬ ಹೆಸರಿನಲ್ಲಿ, ಕಾರ್ಯಕ್ರಮ ನಡೆಯಲಿದ್ದು, ಮಾದಕ್ಕೆ ದ್ರವ್ಯ ಪೀಡಿತರಾಗಿ ಬಳಲುತ್ತಿರುವವರ ಸಮಸ್ಯೆಗಳು, ಅವರನ್ನು ನಂಬಿದ ಕುಟುಂಬ ಬೀದಿ ಪಾಲಾಗುತ್ತಿರುವುದನ್ನು ತಡೆಯುವುದರ ಕುರಿತು ಮತ್ತು ಅಮಲು ಪದಾರ್ಥ ಸೇವಿಸಿ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದನ್ನು ತಪ್ಪಿಸಲು, ಜನರಲ್ಲಿ, ಜನ ಜಾಗೃತಿ ಮೂಡಿಸಿ, ಮಾದಕ ಮುಕ್ತ ಸಮಾಜ ಹಾಗೂ ಶಾಂತಿಯುತ ಬದುಕು ನಿರ್ಮಾಣಕ್ಕಾಗಿ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ, ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಬಹಳ ಅಗತ್ಯತೆ ಹಾಗೂ ಅನಿವಾರ್ಯವಾಗಿದೆ. ಇದು ಕೇವಲ ಸಂಘಟನೆಯೊಂದರ ಕೆಲಸದಿಂದ ಸಾಧ್ಯವಾಗುವುದಿಲ್ಲ. ಇಂತಹ ಕಠಿಣ ಕೆಲಸಕ್ಕೆ, ಸರ್ವರು ಒಗ್ಗೂಡಿದಾಗ ಮಾತ್ರ, ಸಮಾಜವನ್ನು ಮಾದಕ ಮುಕ್ತ ಗೊಳಿಸಲು ಸಹಕಾರವಾಗುತ್ತದೆ. ಆದುದರಿಂದ ಈ ಕಾರ್ಯಕ್ರಮದ ಯಶಸ್ವಿಗೆ ಸರ್ವರು ಸಹಕರಿಸಬೇಕೆಂದು, ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಿನಂತಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!