ಕರಾವಳಿಕ್ರೈಂ

ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿದ್ದ ಅಬ್ದುಲ್ ನಾಸಿರ್ ಮೃತ್ಯು: 8 ಮಂದಿಯ ವಿರುದ್ಧ ಪ್ರಕರಣ ದಾಖಲು



ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿದ್ದ ಕಟ್ಟತ್ತಾರು ನಿಡ್ಯಣದ ಅಬ್ದುಲ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆ.22ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ 341,323, 506 ಜೊತೆಗೆ 149 ಐಪಿಸಿ ಪ್ರಕರಣ ಮುಂದುವರಿದಂತೆ ವಿಷಪ್ರಾಷಣ ಸೇವಿಸಿ ಚಿಕಿತ್ಸೆಯಲ್ಲಿದ್ದ ಅಬ್ದುಲ್ ನಾಸೀರ್ ದಿನಾಂಕ 27.08.2023 ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೃತ ಅಬ್ದುಲ್ ನಾಸೀರ್ ರವರ ತಾಯಿ ನೆಬಿಸರವರು ನೀಡಿದ ದೂರಿನಂತೆ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳಾದ 1.ಸುಮಯ್ಯ, 2.ಅದ್ರಾಮ, 3.ಮೊಯ್ದು, 4.ತಾಜು, 5.ಅಬ್ದುಲ್ಲ, 6.ಸಮೀರ್, 7.ನೌಫಲ್, 8.ಅತ್ತಾವುಲ್ಲಾ ಎಂಬವರುಗಳು ಕಾರಣವೆಂದು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ
ಅ.ಕ್ರ 80-2023 ಕಲಂ: 306 R/w 34 IPC.ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!