ಕರಾವಳಿಕ್ರೈಂ

ಬೆಳ್ತಂಗಡಿ: ಬಸ್-ಬೈಕ್ ನಡುವೆ ಅಪಘಾತ: ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಯುವಕ ದಾರುಣ ಸಾವು



ಬೆಳ್ತಂಗಡಿ: KSRTC ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜೂ.21ರಂದು ಬೆಳಗ್ಗೆ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ಸಂಭವಿಸಿದೆ. ಓಡೀಲು ನಿವಾಸಿಯಾಗಿರುವ ದೀಕ್ಷಿತ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.



ಇಂದು ದೀಕ್ಷಿತ್ ನ ಹುಟ್ಟುಹಬ್ಬವಾಗಿರುವ ಕಾರಣ ಬೆಳಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!