ಅಂತಾರಾಷ್ಟ್ರೀಯಕ್ರೀಡೆ

ಫಿಫಾ ವಿಶ್ವಕಪ್: ಸ್ಪೇನ್ ವಿಶ್ವ ಚಾಂಪಿಯನ್

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪ್ರಬಲ ಅರ್ಜೆಂಟೀನಾ ವಿರುದ್ಧ ಸ್ಪೇನ್ ವಿರೋಚಿತ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದೆ.



ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 1-0 ಗೋಲು ಅಂತರದಲ್ಲಿ ಮಣಿಸಿದ ಸ್ಪೇನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲಾರ್ಧದಲ್ಲಿ ಗೋಲು ರಹಿತವಾಗಿ ಸಾಗಿದ ಪಂದ್ಯ, ದ್ವಿತೀಯಾರ್ಧಲ್ಲಿ ಮತ್ತಷ್ಟು ರೋಚಕವಾಗಿತ್ತು.

 



ಸ್ಪೇನ್ ತನ್ನ ಆಕ್ರಮಣಕಾರಿ ಆಟ ಮುಂದುವರೆಸಿದರೆ, ಅರ್ಜೆಂಟೀನಾ ಕೂಡ ತನ್ನ ರಕ್ಷಣಾತ್ಮಕ ಆಟವನ್ನು ಆಡಿತ್ತು.
ಆದರೆ ಪಂದ್ಯದ ಅವಧಿ ಮುಕ್ತಾಯವಾಗಿ ಹೆಚ್ಚುವರಿ ಸಮಯದಲ್ಲಿ ಸ್ಪೇನ್ ನ ಫೆರಾನ್ ಟೋರ್ಸ್ ಸ್ಪೇನ್ ಪರ ಗೋಲು ಭಾರಿಸಿ ಐತಿಹಾಸಿಕ ಜಯ ತಂದಿತ್ತರು. ವಿಲಿಯಮ್ಸ್ ನೀಡಿದ ಪಾಸ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಫೆರಾನ್ ಟೋರ್ಸ್ ಚೆಂಡನ್ನು ಗೋಲಾಗಿ ಪರವರ್ತಿಸಿದರು. ಅವರ ಈ ಏಕೈಕ ಗೋಲು ಸ್ಪೇನ್ ನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿತು.

Leave a Reply

Your email address will not be published. Required fields are marked *

error: Content is protected !!