ದಾರುಲ್ ಹಸನಿಯಾ ಜುಬೈಲ್ ಘಟಕ ಮತ್ತು ಎಸ್.ಐ.ಸಿ ಜುಬೈಲ್ ಘಟಕದಿಂದ ಅಲಿ ತಂಙಳ್ ಕುಂಬೋಳ್, ಉಸ್ಮಾನುಲ್ ಫೈಝಿ ತೋಡಾರ್ಗೆ ಗೌರವಾರ್ಪಣೆ
ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಎಜು-ಪಾರ್ಕ್, ಪುತ್ತೂರು ಇದರ ಸೌದಿ ಅರೇಬಿಯಾದ ಜುಬೈಲ್ ಘಟಕ ಮತ್ತು ಎಸ್.ಐ.ಸಿ.ಜುಬೈಲ್ ಘಟಕದ ವತಿಯಿಂದ ಜಂಟಿಯಾಗಿ ದಾರುಲ್ ಹಸನಿಯಾ ಸಂಸ್ಥೆಯ ನೂತನ ಅಧ್ಯಕ್ಷರಾದ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಉಸ್ಮಾನುಲ್ ಫೈಝಿ ತೋಡಾರ್ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಅವರಿಗೆ ಅಭಿನಂದನಾ ಸಮಾರಂಭ ಜುಬೈಲ್ನ ಕೋಸ್ಟಲ್ ಡೈನ್ ರೆಸ್ಟೋರೆಂಟ್ನಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಮಾತನಾಡಿ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯು ಎಸ್.ಎನ್.ಇ.ಸಿ ಪಠ್ಯಕ್ರಮವನ್ನು ಅಳವಡಿಸಿಕೊಂಡು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆಯತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಪ್ರಾರ್ಥನೆಗೆ ನೇತೃತ್ವ ನೀಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಉಸ್ಮಾನುಲ್ ಫೈಝಿ ತೋಡಾರ್ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಭವಿಷ್ಯದ ಪೀಳಿಗೆಗೆ ಬೆಳಕು ನೀಡಿದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಂತಹ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅತ್ಯಗತ್ಯ ಎಂದರು.
ಉದ್ಘಾಟಿಸಿದ ಎಸ್.ಐ.ಸಿ ಸೌದಿ ಅರೇಬಿಯಾ ನ್ಯಾಷನಲ್ ಸಮಿತಿಯ ಮುಖಂಡ ಸುಲೈಮಾನ್ ಖಾಸಿಮಿ ಮಾತನಾಡಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯದ ಮೂಲಕ ಮೌಲ್ಯಾಧಾರಿತ ಸಮಾಜ ನಿರ್ಮಾಣದ ಗುರಿಯೊಂದಿಗೆ ಮುನ್ನಡೆಯುತ್ತಿರುವ ದಾರುಲ್ ಹಸನಿಯಾ ಅಕಾಡೆಮಿಯ ಕಾರ್ಯವೈಖರಿ ಪ್ರಶಂಸನೀಯ ಎಂದರು. ದಾರುಲ್ ಹಸನಿಯಾ ಗಲ್ಫ್ ಸಮಿತಿಯ ನಿರ್ದೇಶಕ, ಉದ್ಯಮಿ ಫಾರೂಕ್ ಹಾಜಿ ಪೋರ್ಟ್ವೆ ಮಾತನಾಡಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ದಾರುಲ್ ಹಸನಿಯಾ ಗಲ್ಫ್ ಪ್ರತಿನಿಧಿ ಅಬ್ದುಲ್ ಕರೀಂ ದಾರಿಮಿ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಅವರು ಸಂಸ್ಥೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದರು. ದಾರುಲ್ ಹಸನಿಯಾ ಅಕಾಡೆಮಿಯ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಹಸನಿಯಾ ಸೌದಿ ಅರೇಬಿಯಾ ಸಮಿತಿ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ನಿಸಾರ್ ಪರ್ಲಡ್ಕ, ಉಪಾಧ್ಯಕ್ಷ ತೌಸೀರ್ ದರ್ಬೆ, ಎಸ್.ಐ.ಸಿ ಜುಬೈಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಫೈಝಿ, ಇಸ್ಮಾಯಿಲ್ ಹುದವಿ, ಉಸ್ಮಾನ್ ಶಾಫಿ, ಇಬ್ರಾಹಿಂ ದಾರಿಮಿ, ಅಬ್ದುಲ್ ಮಜೀದ್ ಕರ್ನಿರೆ, ತಾಹಿರ್ ಸಾಲ್ಮರ, ಅಬ್ದುಲ್ ಲತೀಫ್ ಮರಕ್ಕಿಣಿ, ಸುಹೈಲ್ ಕೋಡಿಂಬಾಡಿ, ಇಕ್ಬಾಲ್ ಕುಂತೂರು, ಆಸಿಫ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಕೆ.ಎಸ್.ಕೆ, ಜಸೀಂ, ಶಫೀಕ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎಸ್.ಐ.ಸಿ. ಜುಬೈಲ್ ಸಮಿತಿಯ ಮುಖಂಡ ಸಯ್ಯಿದ್ ಅಹ್ಮದ್ ತಂಙಳ್ ಸ್ವಾಗತಿಸಿದರು. ಆಶಿಕ್ ಬಾಖವಿ ಕಿರಾಅತ್ ಪಠಿಸಿದರು. ಸಲಾಹುದ್ದೀನ್ ಜೋಕಟ್ಟೆ ವಂದಿಸಿದರು. ನವಾಝ್ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು.

