ಮನೆ, ಜಾಗ ಇಲ್ಲದವರು 20 ದಿನದೊಳಗೆ ನಿವೇಶನಕ್ಕೆ ಅರ್ಜಿ ಸಲ್ಲಿಸಿ; ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ರಿಯ ಮತದಾರನಾಗಿದ್ದು, ಮನೆ ಇಲ್ಲದವರು, ಜಾಗವೇ ಇಲ್ಲದವರು ಇದ್ದಲ್ಲಿ ಮುಂದಿನ 20 ದಿನದೊಳಗೆ ಅರ್ಜಿ ಸಲ್ಲಿಸಬೇಕು ಆ ಬಳಿಕ ಸಲ್ಲಿಸಿದ ಅರ್ಜಿಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಈಗಾಗಲೇ 2500 ಕ್ಕೂಮಿಕ್ಕಿ ಅರ್ಜಿಗಳು ನಿವೇಶನಕ್ಕೆ ಬಂದಿವೆ. ನಿವೇಶನ ಹಂಚಲು ಜಾಗವನ್ನು ವಿವಿಧ ಗ್ರಾಮಗಳಲ್ಲಿ ಗುರುತಿಸಲಾಗಿದೆ. ಮುಂದಿನ 20 ದಿನದೊಳಗೆ ಬಂದ ಅರ್ಜಿಯನ್ನು ಮಾತ್ರ ಪರಿಗಣಿಸಿ ಪಟ್ಟಿ ಅಂತಿಮ ಮಾಡಲಾಗುವುದು. ಅರ್ಜಿ ಹಾಕಲು ಬಾಕಿ ಇರುವ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು ಎಂದು ಶಾಸಕರು ಮನವಿ ಮಾಡಿದರು.




