ಅರಿಯಡ್ಕ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ
ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ನ.29ರಂದು ನಡೆಯಲಿರುವ ‘ಅರಿಯಡ್ಕ ಉತ್ಸವ-2026’ ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನ.5ರಂದು ಸಂಜೆ ಕೌಡಿಚ್ಚಾರ್ ನಲ್ಲಿ ನಡೆಯಿತು.

ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ಪ್ರಗತಿಪರ ಕೃಷಿಕ ಸದಾಶಿವ ರೈ ಮಾತನಾಡಿ ಅರಿಯಡ್ಕ ಉತ್ಸವ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಯಲಿ, ಶಾಸಕ ಅಶೋಕ್ ಕುಮಾರ್ ಅವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ತಂದು ಅಭೂತಪೂರ್ವ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ, ಇದು ಸಂತೋಷದ ವಿಚಾರ ಎಂದು ಹೇಳಿದರು.
ಸ್ವಾಗತಿಸಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನ.29ರಂದು ನಡೆಯುವ ಅರಿಯಡ್ಕ ಉತ್ಸವವು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಚಂದ್ರಶೇಖರ ಮಣಿಯಾಣಿ ಕುರಿಂಜ, ಬ್ಲಾಕ್ ಎಸ್ಟಿ ಘಟಕದ ಉಪಾಧ್ಯಕ್ಷ ವಿಠಲ ನಾಯ್ಕ, ವನರಾಜ ಸಿ ಆರ್ ಸಿ, ವನರಾಜ್ಯ, ಲೋಕೇಶ್ ಶೆಟ್ಟಿ ಪಾಪೆಮಜಲು, ಗಣೇಶ್ ಮಣಿಯಾನಿ ಅರಿಯಡ್ಕ, ಸತ್ಯೇಂದ್ರನ್ ಸಿ.ಆರ್.ಸಿ, ರತ್ನಾಕರ ರೈ ಮಡ್ಯಂಗಳ, ವಿಶ್ವನಾಥ ಮೇಲಿನ ಬಳ್ಳಿಕಾನ, ಗಿರೀಶ್ ಜಾರತ್ತಾರು, ವೆಂಕಪ್ಪ ನಾಯ್ಕ ಮಾಯಿಲ ಕೊಚ್ಚಿ, ಸೀತಾರಾಮ ಕುರಿಂಜ ಮನ್ನಾಪು, ಶೀನ ಮುಂಡಕೊಚ್ಚಿ, ಐತ್ತಪ್ಪ ನಾಯ್ಕ ಪೆರ್ನೂಕು, ಸುಂದರ ಭಂಡಾರಿ, ಹನೀಫ್ ಪಟ್ಲಕಾಣ, ರಾಜೇಶ್ ಪಾಪೆಮಜಲು, ನಾಗರಾಜ ಸಿ.ಆರ್.ಸಿ, ಚಂದ್ರ ಮಣಿಯಾನಿ ಕುಂಟಾಪು, ಶಿವರಾಮ ಮಣಿಯಾನಿ, ಯೂಸುಫ್ ರಾಝ್ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಬಶೀರ್ ಕೌಡಿಚ್ಚಾರ್ ವಂದಿಸಿದರು.



