ಅಂತಾರಾಷ್ಟ್ರೀಯರಾಜಕೀಯ

ಇಸ್ರೇಲ್: ನೆತನ್ಯಾಹು ಜತೆ ಮೈತ್ರಿಗೆ ನಿರಾಕರಿಸಿದ ವಿಪಕ್ಷ

ಇಸ್ರೇಲ್ ಚುನಾವಣೆ ಬಳಿಕ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಕಸರತ್ತು ಮುಂದುವರಿದಿದ್ದು ನೆತನ್ಯಾಹು ಅವರ ಜತೆ ಕೈಜೋಡಿಸಿ ಸರ್ಕಾರದ ಭಾಗವಾಗಲು ವಿಪಕ್ಷ ನಿರಾಕರಿಸಿದೆ.

 ಇಸ್ರೇಲ್ ಚುನಾವಣೆ ಬಳಿಕ ವಿಪಕ್ಷಗಳ ಮೊದಲ ಸಭೆ ನಡೆದಿದ್ದು, ನೇತನ್ಯಾಹು ಜತೆಗೆ ನಾವು ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಮಾಡಿಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದರೂ ಅದು ಸಾಧ್ಯವಿಲ್ಲ ಎಂದು ವಿಪಕ್ಷದ ನಾಯಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.


ಇಸ್ರೇಲ್ ಸಂಸತ್ತು 120 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 61 ಸ್ಥಾನಗಳ ಅವಶ್ಯಕತೆಯಿದೆ. ಆದರೆ ನೇತನ್ಯಾಹು ಪಕ್ಷ 53, ವಿಪಕ್ಷ 48, ಅರಬ್ ಬೆಂಬಲಿತ ಪಕ್ಷಗಳು 19 ಸ್ಥಾನಗಳನ್ನು ಗೆದ್ದಿವೆ. ಹೀಗಾಗಿ ಯಾವುದೇ ಪಕ್ಷಗಳಿಗೂ ಬಹುಮತ ದೊರೆತಿಲ್ಲ.

Leave a Reply

Your email address will not be published. Required fields are marked *

error: Content is protected !!