ಆಝಾನ್ ಕೊಡುತ್ತಿದ್ದ ವೇಳೆ ಕುಸಿದು ಬಿದ್ದು ಲತೀಫ್ ಮದನಿ ನಿಧನ
ಆಝಾನ್ ಕೊಡುತ್ತಿದ್ದ ವೇಳೆ ವ್ಯಕ್ತಿ ಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಹೊನ್ನಾವರ ತಾಲೂಕಿನ ಕಾಸರಕೋಡ್‌ನ ಮುಹಿಯುದ್ದೀನ್ ಜಾಮಿಯಾ ಮಸೀದಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತರನ್ನು ದ.ಕ.ಜಿಲ್ಲೆಯ ಕುಕ್ಕಾಜೆ ನಿವಾಸಿ ಅಬ್ದುಲ್ ಲತೀಫ್ ಮದನಿ (57) ಎಂದು ಗುರುತಿಸಲಾಗಿದೆ.
ಇವರು ಕಳೆದ ಒಂದು ವರ್ಷದಿಂದ ಹೊನ್ನಾವರ ಕಾಸರಕೋಡ್ ಮುಹಿಯುದ್ದೀನ್ ಜಾಮಿಯಾ ಮಸೀದಿಯಲ್ಲಿ ಮುಅಲ್ಲಿಮ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಸರ್ ನಮಾಜಿನ ಆಝಾನ್ ಕೊಡುತ್ತಿದ್ದ ಈ ವೇಳೆ ಏಕಾಏಕಿ ಕುಸಿದು ಬಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.





