ಸುಳ್ಯ: ವಿದ್ಯುತ್ ಆಘಾತ, ಯುವಕ ಮೃತ್ಯು
ಸುಳ್ಯ: ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಆಲೆಟ್ಟಿ ಗ್ರಾಮದ ಪೈಂಬೆಜ್ಜಾಲ್‌ನ ತೋಟಕೊಚ್ಚಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಪೈಂಬೆಟ್ಬಾಲ್ ತೋಟಕೊಚ್ಚಿಯ ಮುಹಮ್ಮದ್ ಶರೀಫ್ (35)ಮೃತಪಟ್ಟವರು. ತೋಟಕೊಚ್ಚಿ ಪ್ರದೇಶದಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿತ್ತು. ಇದರಿಂದ
ಉಂಟಾಗುವ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಲೈನ್ ಆಫ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.





