ಮುಕ್ರಂಪಾಡಿ ನಿವಾಸಿ ಎಂ.ಡಿ ಹುಸೈನ್ ಬೆಂಗಳೂರಿನಲ್ಲಿ ನಿಧನ
ಪುತ್ತೂರು: ಮೂಲತಃ ಪುತ್ತೂರು ಮುಕ್ರಂಪಾಡಿ ನಿವಾಸಿಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ಡಿ ಹುಸೈನ್(73.ವ) ಅವರು ಹೃದಯಾಘಾತದಿಂದ ಜೂ.9ರಂದು ಬೆಳಗಿನ ಜಾವ ನಿಧನರಾದರು.

ಮೃತರು ಪತ್ನಿ ಜುಬೈದಾ, ಮಕ್ಕಳಾದ ಹಸದುಲ್ಲಾ, ಹರ್ಷದ್, ಅಸ್ಗರ್, ಹಿದಾಯತ್ ಮತ್ತು ಫಾತಿಮತ್ ಸಲ್ಮಾ, ಸಹೋದರರಾದ ಇಬ್ರಾಹಿಮ್, ಅಬ್ಬಾಸ್ ಕುಂಬ್ರ ಮತ್ತು ಅಮೀರ್ ಅಹಮದ್ ಅವರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.





