ಪುತ್ತೂರು: ತಿಂಗಳಾಡಿಯಲ್ಲಿ ಸ್ಕೂಟರ್ ಟಯರ್ ಸ್ಫೋಟ: ದಂಪತಿ, ಮಗುವಿಗೆ ಗಾಯ
ಪುತ್ತೂರು: ದ್ವಿಚಕ್ರ ವಾಹನದ ಹಿಂಬದಿಯ ಟಯರ್ ಸ್ಪೋಟಗೊಂಡು ದಂಪತಿ ಮತ್ತು ಮಗು ಗಾಯಗೊಂಡಿರುವ ಘಟನೆ ತಿಂಗಳಾಡಿ ಸಮೀಪದ ತ್ಯಾಗರಾಜನಗರದಲ್ಲಿ ನ.17ರಂದು ಸಂಜೆ ನಡೆದಿದೆ.
ಕುಂಬ್ರದಿಂದ ತಿಂಗಳಾಡಿ ಕಡೆಗೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಸ್ಕೂಟರ್ ತ್ಯಾಗರಾಜನಗರ ತಲುಪುತ್ತಿದ್ದಂತೆ ಹಿಂಬದಿ ಟಯರ್ ಸ್ಪೋಟಗೊಂಡಿದ್ದು ಸ್ಕೂಟರಿನಲ್ಲಿದ್ದ ಮೂವರೂ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳಿಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ