ಕರಾವಳಿ

ಸಾರೆಪುಣಿ: ಮೃತ ಫಾತಿಮತ್ ಇಶಾನ  ಮನೆಗೆ ಧಾರ್ಮಿಕ ಮುಖಂಡರ ಭೇಟಿ



ಪುತ್ತೂರು: ಸಂಪಾಜೆಯಲ್ಲಿ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಫಾತಿಮತ್ ಇಶಾನ ಅವರ ನಿವಾಸಕ್ಕೆ ಸಮಸ್ತ ಕೇರಳ ಜಂಇಯತುಲ್ ಉಲಮಾ ಪುತ್ತೂರು ತಾಲೂಕು ಅಧ್ಯಕ್ಷರು ಹಾಗೂ ಸಾರೆಪುಣಿ ಜುಮಾ ಮಸೀದಿ ಗೌರವಾಧ್ಯಕ್ಷರಾದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.



ಪ್ರಾರ್ಥನೆ ನೆರವೇರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು, ಇಲ್ಲಿ ಯಾರಿಗೂ ಅನ್ಯಾಯವಾಗಬಾರದು, ಫಾತಿಮತ್ ಇಶಾನ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಈಗಾಗಲೇ ತನಿಖೆ ಹಂತದಲ್ಲಿದ್ದು ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯ ಹೊರಬರಬೇಕು ಎಂದು ಹೇಳಿದರು. ಈ ರೀತಿಯ ಘಟನೆಗಳು ಮುಂದಕ್ಕೆ ಎಲ್ಲಿಯೂ ನಡೆಯಬಾರದು, ಇಂತಹ ಘಟನೆ ಸಂಭವಿಸಿದರೆ ಅದರ ಪರಿಣಾಮ ಸುಧೀರ್ಘ ವರ್ಷಗಳ ಕಾಲ ಸಂಬಂಧಪಟ್ಟವರನ್ನು ಕಾಡುತ್ತಿರುತ್ತದೆ ಎಂದ ಅವರು ಫಾತಿಮತ್ ಇಶಾನ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ನೀಡಲಿ ಎಂದು ಪ್ರಾರ್ಥಿಸಿದರು.

 

ಈ ಸಂದರ್ಭದಲ್ಲಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ಅಬ್ದುಲ್ ಹಮೀದ್ ದಾರಿಮಿ, SKSSF ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಜಂಇಯತುಲ್ ಉಲಮಾ ಉಪಾಧ್ಯಕ್ಷರಾದ ಉಮರ್ ದಾರಿಮಿ, ಅಬ್ಬಾಸ್ ಮದನಿ, ಅಶ್ರಫ್ ದಾರಿಮಿ ಸಂಟ್ಯಾರ್, ಶುಕೂರ್ ದಾರಿಮಿ ಹಾಗೂ ಬಶೀರ್ ಕೌಡಿಚ್ಚಾರ್ ಹಾಗೂ ಸಾರೆಪುಣಿ ಜಮಾಅತ್ ಅಧ್ಯಕ್ಷ ಅಶ್ರಫ್ ಸಾರೆಪುಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!