Uncategorizedಕರಾವಳಿ

22 ವರ್ಷಗಳಿಂದ ಮರಣದ ವಾರ್ತೆಯನ್ನು ಬಿತ್ತರಿಸುವ ಪುತ್ತೂರಿನ ಉದ್ಯಮಿ



ಮೊಬೈಲ್ ಬಂದ ಬಳಿಕ ಜರಿಗೆ ಎಲ್ಲವೂ ಹತ್ತಿರವಾಗಿದೆ. ಇತ್ತೀಚಿನ ವರ್ಷಗಳಿಂದ ಸಾಮಾಜಿಕ ಜಾಲತಾಣ ಬಲಿಷ್ಠವಾಗಿದೆ. ಯಾವುದೇ ಸುದ್ದಿಗಳು ಜಾಲತಾಣದಲ್ಲಿ ಬಂದರೂ ಜನ ಅದನ್ನು ಅಷ್ಟು ಬೇಗನೆ ನಂಬುತ್ತಿಲ್ಲ ಇದಕ್ಕೆ ಕಾರಣ ಫೇಕ್ ಸುದ್ದಿಗಳೇ ಜಾಲತಾಣದಲ್ಲಿ ಹರಿದಾಡುತ್ತಿರುವುದು. ಮೊಬೈಲ್ ಸದ್ಬಳಕೆಯಷ್ಟೆ ದುರ್ಬಳಕೆಯೂ ಅಗುತ್ತಿದೆ. ಈ ಸಾಲಿಗೆ ಸಮಾಜಿಕ ಜಾಲತಾಣವಾದ ವ್ಯಾಟ್ಸಪ್ ಕೂಡಾ ಸೇರಿಕೊಂಡಿದೆ. ಅನಗತ್ಯ ಸಂದೇಶ ರವಾನೆ ಮಾಡಿ ಅನೇಕರು ಜೈಲು ಪಾಲಾಗಿದ್ದೂ ಇದೆ. ಸುದ್ದಿ ರವಾನೆಯಿಂದ ಜನತೆಗೆ ಉಪಕಾರವಾದ ಸಂಗತಿಗಳೂ ಇದೆ. ಆದರೆ ಪುತ್ತೂರಿನ ಕಲ್ಲೆಗ ನಿವಾಸಿ ಉದ್ಯಮಿ ಯೋರ್ವರು ಇದೆಲ್ಲಕಿಂತಲೂ ಭಿನ್ನವಾಗಿ ಸಮಾಜಿಕ ತಾಣವನ್ನು ಬಳಸುತ್ತಿದ್ದಾರೆ. ಅವರು ಹಾಕುತ್ತಿರುವ ಸಂದೇಶ ಕೇವಲ ‘ಮರಣವಾರ್ತೆ’ ಮಾತ್ರ….!

ಹನೀಫ್ ಹಾಜಿ ಕಲ್ಲೆಗರವರನ್ನು ಜನ ಹನೀಫ್ ಹಾಜಿ ಉದಯ ಎಂದೇ ಕರೆಯುತ್ತಾರೆ. ಆ ಹೆಸರಿನಿಂದಲೇ ಅವರು ಚಿರಪರಿಚಿತರಾಗಿದ್ದಾರೆ. ಸಾಧಾರಣವಾಗಿ ಎಲ್ಲಾ ವ್ಯಾಟ್ಸಪ್ ಗ್ರೂಪಿನಲ್ಲಿ ಇವರಿರುತ್ತಾರೆ. ಇವರು ಇಲ್ಲದ ವ್ಯಾಟ್ಸಪ್ ಗ್ರೂಪ್ ಅಪರೂಪ ಎಂದೇ ಹೇಳಬಹುದು. ಯಾಕೆಂದರೆ ಹನೀಫ್ ಹಾಜಿ ಗ್ರೂಪಲ್ಲಿ ಅಗತ್ಯವಾಗಿ ಇರಬೇಕಾದ ಸ್ಥಿತಿ ಮೀಡಿಯಾ ಸೃಷ್ಟಿಸಿದೆ. ಯಾವುದೇ ಊರಿನಲ್ಲಿ ಯಾರೇ ಮರಣ ಹೊಂದಲಿ ಹನೀಫ್ ಹಾಜಿಗೆ ಮೊದಲ ಕರೆ ಹೋಗುತ್ತದೆ. ಕರೆ ಬಾರದೇ ಇದ್ದರೂ ಮರಣದ ಸುದ್ದಿ ಸಿಕ್ಕಿದರೆ ಸಾಕು ಆ ಊರಿನ ಯಾರಿಗಾದರೂ ಕರೆ ಮಾಡಿ ಮರಣ ಹೊಂದಿದ ವ್ಯಕ್ತಿಯ ಪೂರ್ಣ ಕುಟುಂಬದ ಪರಿಚಯ ಚಿತ್ರಣದೊಂದಿಗೆ ಸುದ್ದಿಯನ್ನು ಪ್ರಚಾರ ಮಾಡುತ್ತಾರೆ. ಮರಣ ಹೊಂದಿದವರ ಬಗ್ಗೆ ಮತ್ರವಲ್ಲ ಅವರ ಮಕ್ಕಳು ಯಾರು? ಅವರು ಏನು ಮಾಡುತ್ತಿದ್ದಾರೆ? ಅವರ ಪೂರ್ಣ ಮಾಹಿತಿಯನ್ನೊಳಗೊಂಡ ಮಾಹಿತಿಯನ್ನು ಸಿದ್ದಪಡಿಸಿ ಮಗದೊಮ್ಮೆ ಸುದ್ದಿಯನ್ನು ಶುದ್ದೀಕರಿಸಿಯೇ ಇವರು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾರೆ.

ಹನೀಫ್ ಹಾಜಿ ಉದಯರವರ ಮರಣದ ವಾರ್ತೆಯ ಸುದ್ದಿ ಪಕ್ಕಾ ಆಗಿರುತ್ತದೆ ಎಂಬುದು ಎಲ್ಲರಿಗೂ ನಂಬಿಕೆ. ಆ ನಂಬಿಕೆಯನ್ನು ಉಳಿಸಿಕೊಂಡು ಇಂದಿಗೂ ಉಳಿಸಿಕೊಂಡಿದ್ದಾರೆ. ೨೦೦೧ ರಿಂದ ೨೦೨೨ ರತನಕ ಸುಮಾರು ೧೫ ಸಾವಿರಕ್ಕಿಂತಲೂ ಮಿಕ್ಕಿದ ಮರಣ ವಾರ್ತೆಯನ್ನು ಪ್ರಚಾರ ಪಡಿಸಿದ್ದಾರೆ. ಎಲ್ಲಿಯಾದರೂ ಯಾರಾದರೂ ಮರಣ ಹೊಂದಿದರೆ ಹನೀಫ್ ಹಾಜಿಯವರ ಮೆಸೆಜ್‌ಗಾಗಿ ಜನ ಕಾಯುವ ಪರಿಸ್ಥಿತಿ ಬಂದಿರುವುದು ಅವರ ಮೇಲಿನ ನಂಬಿಕೆಗೆ ಉದಾಹರಣೆಯಾಗಿದೆ.

ಮರಣ ವಾರ್ತೆಯನ್ನು ಪ್ರಚಾರಪಡಿಸುವಾಗ ಅತ್ಯಂತ ಜಾಗೃತೆಯಿಂದ ಇರಬೇಕಾಗುತ್ತದೆ. ಮರಣಹೊಂದಿದ ಸುದ್ದಿ ನಾನಾ ಮೂಲಗಳಿಂದ ಬರುತ್ತದೆ ಅದನ್ನು ದೃಡೀಕರಿಸಿದ ಬಳಕವೇ ನಾನು ಪ್ರಚಾರ ಮಾಡುತ್ತಿದ್ದೇನೆ. ಮರಣ ಹೊಂದಿದ ವ್ಯಕ್ತಿಯ ಕುಟುಂಬಸ್ಥರ ಸಂಪರ್ಕಿಸಿದ ಬಳಿಕವೇ ಅವರಿಂದ ಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸುದ್ದಿ ಬಿತ್ತರಿಸುತ್ತಿದ್ದೇನೆ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರ ಸುದ್ದಿಗಳನ್ನೂ ಹಾಕುತ್ತಿದ್ದೇನೆ. ಇದರಿಂದ ಮರಣ ಹೊಂದಿದ ಕುಟುಂಬಸ್ಥರಿಗೂ ಅವರ ಸಂಬಂಧಿಕರಿಗೂ ಮಾಹಿತಿ ಸಿಗುತ್ತದೆ. ಇದೊಂದು ಪುಣ್ಯದಾಯಕ ಕೆಲಸ ಎಂಬ ನಂಬಿಕೆ ಇದೆ. ಮರಣ ವಾರ್ತೆ ಸುದ್ದಿಗಳು ಆದಷ್ಟು ಕಡಿಮೆಯಾಗಲಿ ಎಂಬುದೇ ನನ್ನ ಆಶಯ -ಹನೀಫ್ ಹಾಜಿ ಉದಯ ಕಲ್ಲೆಗ

Leave a Reply

Your email address will not be published. Required fields are marked *

error: Content is protected !!