SSF ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಕೂಟ, ಪ್ರಾರ್ಥನಾ ಸಂಗಮ
ಉಪ್ಪಿನಂಗಡಿ: SSF ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಕೂಟ ಹಾಗೂ ಪ್ರಾರ್ಥನಾ ಸಂಗಮ ಮಾ.16ರಂದು ನಡೆಯಿತು.
ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಿದ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ಮಾತನಾಡಿ, ಯುವ ಸಮೂಹವನ್ನು ಅಧ್ಯಾತ್ಮಿಕತೆಯತ್ತ ಕೊಂಡೊಯ್ಯುವಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದ್ದು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಹೋದರತ್ವ, ಸೌಹಾರ್ದತೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದರು.

ಅತಿಥಿಗಳಾಗಿದ್ದ ಇಸಾಕ್ ಮದನಿ ಅಳಕ್ಕೆ, ಉಸ್ಮಾನ್ ಸಹದಿ ತೆಕ್ಕಾರು, ಬಶೀರ್ ಮದನಿ ಸೆರ್ಕಳ ಹಾಗೂ ಜಮಾಅತ್ ಕಾರ್ಯದರ್ಶಿ ನಝಿರ್ ಟಿ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು. SSF ತೆಕ್ಕಾರು ಯುನಿಟ್ ಅಧ್ಯಕ್ಷ ಜಾಫರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೋಶಾಧಿಕಾರಿ ಸೆಕಿರ್ ಮಾಸ್ಟರ್ ಸ್ವಾಗತಿಸಿದರು.ಕಾರ್ಯದರ್ಶಿ ನಸೀಫ್ ವಂದಿಸಿದರು.





