ನಾಳೆ(ಆ.8) ಪುತ್ತೂರು ಉಪ ವಿಭಾಗದ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಪುತ್ತೂರು: ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳ ಅಂಗನವಾಡಿ, ಸರಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು ಮತ್ತು ಎಲ್ಲಾ ಐ ಟಿ ಐ ಮತ್ತು ಡಿಪ್ಲೋಮ ಕಾಲೇಜುಗಳು 12ನೇ ತರಗತಿ(ಎಲ್ಲಾ ವಸತಿ ಶಾಲಾ ಸೇರಿದಂತೆ) ಗಳಿಗೆ ಆಗಸ್ಟ್ 8ರಂದು ರಜೆ ಘೋಷಿಸಲಾಗಿದೆ.



