ಸುಳ್ಯ: ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ಗರ್ಭಿಣಿ ಮಹಿಳೆಯೋರ್ವರು ನೇಣು ಬಿಗಿದು ಆತ್ ಹತ್ಯೆ ಮಾಡಿಕೊಡಿರುವ ಘಟನೆ ಇದೀಗ ವರದಿಯಾಗಿದೆ.

ಮೃತ ಮಹಿಳೆ ಶರತ್ ಎಂಬವರ ಪತ್ನಿ ಮಲ್ಲಿಕಾ (26) ಎಂದು ತಿಳಿದು ಬಂದಿದೆ.
ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದ ಮಲ್ಲಿಕಾ ಇಂದು ಮನೆಯಲ್ಲಿದ್ದರು. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದುಕೊಂಡಿರುವುದಾಗಿ ತಿಳಿದು ಬಂದಿದೆ.
ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಪರೀಕ್ಷೆ ನಡೆಸಲು ತಂದಿರುವುದಾಗಿ ತಿಳಿದು ಬಂದಿದೆ.