ಕರಾವಳಿಕ್ರೈಂ

ಸುಳ್ಯ: ಸಮುದಾಯ ಸೇವೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಬೇಸರಗೊಂಡ ಯುವಕ ಆತ್ಮಹತ್ಯೆಗೆ ಯತ್ನ



ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ,  ನ್ಯಾಯಾಲಯದಿಂದ 15 ದಿನಗಳ ಸಮುದಾಯ ಸೇವೆಗೆ ಗುರಿಯಾಗಿದ್ದ ಸುಳ್ಯ ನಿವಾಸಿ  ರಕ್ಷಿತ್ ಜಿ (29) ಎಂಬವರು ನ್ಯಾಯಾಲಯದ ಅದೇಶದಂತೆ ಮಾ.15ರಂದು ಸಮುದಾಯಿಕ ಸೇವೆಯಾಗಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮತ್ತು ನಿಯಂತ್ರಣ ಕಾರ್ಯವನ್ನು ನಿರ್ವಹಿಸಿದ್ದರು.

ಅದೇ ದಿನ ತಾನು ಸಲ್ಲಿಸಿದ ಸಮುದಾಯ ಸೇವೆಯ ವಿಚಾರ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು, ಮನೆಯಲ್ಲಿದ್ದಾಗ ಗಮನಿಸಿದ ರಕ್ಷಿತ್ ಜಿ ಇದರಿಂದ ಬೇಸರಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!