ಸುಳ್ಯ :ಮದನಿಯಂ ಮಜ್ಲೀಸ್ ನೊಂದಿಗೆ ಪೈಚಾರ್ ಅಲ್- ಅಮೀನ್ ಯೂತ್ ಸೆಂಟರ್’ನ 16ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ಸಂಪನ್ನ
ಸುಳ್ಯ ಪೈಚಾರಿನಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗೊಳೊಂದಿಗೆ ಗುರುತಿಸಿಕ್ಕೊಂಡಿರುವ ಅಲ್ -ಅಮೀನ್ ಯೂತ್ ಸೆಂಟರ್ ರಿ. ಇದರ 16ನೇ ಸ್ವಲಾತ್ ವಾರ್ಷಿಕ, ಬುರ್ದಾಮಜ್ಲೀಸ್ ಕಾರ್ಯಕ್ರಮದ ಸಮಾಪನ ದಿನವಾದ ಇಂದು ಅಂತರಾಷ್ಟ್ರೀಯ ಖ್ಯಾತ ವಾಗ್ಮಿ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ರವರ ನೇತೃತ್ವದ ಮದನಿಯಂ ಮಜ್ಲೀಸ್ ನೊಂದಿಗೆ ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಅಬೂಸಾಲಿ ವಹಿಸಿದ್ದರು.
ದುವಾ ಮೂಲಕ ಕಾರ್ಯಕ್ರಮವನ್ನು ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ತಂಗಳ್ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ಸಯ್ಯದ್ ಹುಸೈನ್ ತಂಗಳ್ ಆದೂರು, ಸ್ಥಳೀಯ ಮಸೀದಿ ಖತೀಬರಾದ ಮುನೀರ್ ಸಖಾಫಿ, ಸದರ್ ಮುಅಲ್ಲಿಮ್ ಮುಹಿಯದ್ದೀನ್ ಲತೀಫಿ, ಸ್ಥಳೀಯ ಮಸೀದಿ ಅಧ್ಯಕ್ಷ ಶರೀಫ್ ಟಿ ಎ,ಸಮೀತಿ ಗೌರವ ಅಧ್ಯಕ್ಷ ಇಬ್ರಾಹಿಂ ಪೈಝಿ, ಮೊಗರ್ಪಣೆ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಮಾಪಿಳಡ್ಕ ದರ್ಗಾ ಕಮಿಟಿ ಅಧ್ಯಕ್ಷ ಎ ಬಿ ಅಶ್ರಫ್ ಸಅದಿ, ಪೈಚಾರ್ ಗ್ರಾ. ಪಂ ಸದಸ್ಯ ಮುಜೀಬ್, ಗಾಂಧಿನಗರ ಮದರಸ ಅಧ್ಯಾಪಕ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ದ ಕ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿ ದುವಾ ಮಜ್ಲೀಸನಲ್ಲಿ ಪಾಲ್ಗೊಂಡರು.
ಸಮಿತಿಯ ಸರ್ವಸದಸ್ಯರು ಸಹಕರಿಸಿದರು.