ಭೂತಾನ್ ದೇಶದ ಅಡಿಕೆ ಆಮದು ಕರಾವಳಿಯ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಉಂಟುಮಾಡುವುದು ಖಚಿತ
ಪುತ್ತೂರು: ಬಿಜೆಪಿ ಸರಕಾರದ ಅಚ್ಛೇದಿನದ ಭಾಗವಾಗಿರುವ ಭೂತಾನ್ ದೇಶದ ಅಡಿಕೆ ಆಮದು ಕರಾವಳಿಯ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಉಂಟುಮಾಡುವುದು ಖಚಿತ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ

ಈವರೆಗೂ ಸಮಸ್ಯೆಗಳಿಲ್ಲದೆ ಉತ್ತಮ ಧಾರಣೆ ಪಡೆಯುತ್ತಿದ್ದ ಅಡಿಕೆ ಬೆಳೆಗಾರರು ಸಹ ಮುಂದಿನ ದಿನಗಳಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವ ಸ್ಥಿತಿ ಉಲ್ಬಣಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಅವರು ತಿಳಿಸಿದ್ದಾರೆ.