ಮಾಡನ್ನೂರು ನೂರುಲ್ ಹುದಾ ಅಧ್ಯಕ್ಷರಾಗಿ ಬುಶ್ರಾ ಅಬ್ದುಲ್ ಅಝೀಝ್ ಪುನರಾಯ್ಕೆ
ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ೨೦೨೨-೨೪ನೇ ಸಾಲಿನ ಅಧ್ಯಕ್ಷರಾಗಿ ಬುಶ್ರಾ ಅಬ್ದುಲ್ ಅಝೀಝ್ ಪುನರಾಯ್ಕೆಗೊಂಡಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಮಂಗಳಾ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಕೋಶಾಧಿಕಾರಿಯಾಗಿ ಎನ್.ಎಸ್ ಅಬ್ದುಲ್ಲ ಹಾಜಿ ಈಶ್ವರಮಂಗಲ ಆಯ್ಕೆಯಾಗಿದ್ದಾರೆ. ನೂರುಲ್ ಹುದಾ ಕ್ಯಾಂಪಸ್ ಹಾಲ್‌ನಲ್ಲಿ ನಡೆದ ಸಂಸ್ಥೆಯ ೮ನೇ ವಾರ್ಷಿಕ ಪ್ರಚಾರ ಅಭಿಯಾನದ ಭಾಗವಾಗಿ ಹಮ್ಮಿಕೊಂಡ ಲೀಡರ್ಸ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಸ್ಥೆಯ ಮುಖ್ಯ ಸಲಹೆಗಾರರಾದ ಪಾಣಕ್ಕಾಡ್ ಅಬ್ಬಾಸ್ ಅಲೀ ಶಿಹಾಬ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸಿ.ಎಚ್ ಅಬ್ದುಲ್ ಅಝೀಝ್ ಹಾಜಿ, ಡೈರೆಕ್ಟರ್ ಆಗಿ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ಉಪಾಧ್ಯಕ್ಷರುಗಳಾಗಿ ಹಿರಾ ಅಬ್ದುಲ್ ಖಾದರ್ ಹಾಜಿ ಈಶ್ವರಮಂಗಲ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಇಬ್ರಾಹಿಂ ಹಾಜಿ ಮಂಡೆಕೋಲು, ಇಸ್ಮಾಯಿಲ್ ಹಾಜಿ ನೆಕ್ಕರೆ, ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಯೂಸುಫ್ ಮೇನಾಲ, ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ ಆಯ್ಕೆಯಾದರು. ಕಚೇರಿ ನಿರ್ವಹಣಾಧಿಕಾರಿಯಾಗಿ ನಿವೃತ್ತ ಎಎಸ್ಸೈ ಎಂ.ಡಿ ಹಸೈನಾರ್, ಕಾರ್ಯದರ್ಶಿಗಳಾಗಿ ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಕೆಂಪಿ ಮುಸ್ತಫಾ ಹಾಜಿ ಉಪ್ಪಿನಂಗಡಿ, ಆದಂ ಹಾಜಿ ಸುಳ್ಯ, ಹಸೈನಾರ್ ಹಾಜಿ ಸಿಟಿಬಜಾರ್, ತಾಜ್ ಮಹಮ್ಮದ್ ಸಂಪಾಜೆ, ಅಶ್ರಫ್ ಹಾಜಿ ಉಪ್ಪಿನಂಗಡಿ ಆಯ್ಕೆಯಾದರು.