ಕರಾವಳಿ

ರೆಂಜಲಾಡಿ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಕಲ್ಪಣೆ ಪ್ರಾ.ಶಾಲೆಗೆ ಸಿ.ಸಿ ಕ್ಯಾಮರಾ ಕೊಡುಗೆ



ಪುತ್ತೂರು: ಸ್ಪೋರ್ಟಿಂಗ್ ಕ್ಲಬ್ ರೆಂಜಲಾಡಿ ವತಿಯಿಂದ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಗೆ ಸಿ.ಸಿ ಕ್ಯಾಮರಾ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನ.9ರಂದು ನಡೆಯಿತು. ಸ್ಪೋರ್ಟಿಂಗ್ ಕ್ಲಬ್ ಉಪಾಧ್ಯಕ್ಷ ಹಾರಿಸ್ ಕೂಡುರಸ್ತೆ ಸಿ.ಸಿ ಕ್ಯಾಮರಾವನ್ನು ಉದ್ಘಾಟನೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಸ್ಪೋರ್ಟಿಂಗ್ ಕ್ಲಬ್ ರೆಂಜಲಾಡಿ ವತಿಯಿಂದ ಸಿ.ಸಿ ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದ್ದು ಇದು ನಮ್ಮ ಶಾಲೆಯ ಸುರಕ್ಷತೆಯ ದೃಷ್ಟಿಯಿಂದ ಬಹಳ ಪ್ರಯೋಜಕಾರಿಯಾಗಲಿದೆ, ಹಿರಿಯ ವಿದ್ಯಾರ್ಥಿಗಳು ಶಾಲೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದರೆ ಶಾಲೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಕಮಲಾ ಮಾತನಾಡಿ ತಾವು ವಿದ್ಯೆ ಕಲಿತ ಶಾಲೆಗೆ ಸ್ಪೋರ್ಟಿಂಗ್ ಕ್ಲಬ್‌ನವರು ಸಿ.ಸಿ ಕ್ಯಾಮರಾ ನೀಡಿರುವುದು ಅಭಿನಂದನೀಯ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ನೇರೋಳ್ತಡ್ಕ, ಕಲ್ಪಣೆ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಸರ್ವೆ ಕಲ್ಪಣೆ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕಲ್ಪಣೆ ಆದಿ ಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯ ಅಧ್ಯಕ್ಷ ಗಣೇಶ್ ನೇರೋಳ್ತಡ್ಕ, ರೆಂಜಲಾಡಿ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಹಾರಿಸ್ ಕೂಡುರಸ್ತೆ ಶುಭ ಹಾರೈಸಿದರು. ಸಿ.ಸಿ ಕ್ಯಾಮರಾ ಕೊಡುಗೆ ನೀಡಿದ ಸ್ಪೋರ್ಟಿಂಗ್ ಕ್ಲಬ್‌ಗೆ ಶಾಲೆಯ ವತಿಯಿಂದ ಸ್ಮರಣಿಕೆ ನೀಡಲಾಯಿತು. ಸ್ಪೊರ್ಟಿಂಗ್ ಕ್ಲಬ್ ಉಪಾಧ್ಯಕ್ಷ ಹಾರಿಸ್ ಕೂಡುರಸ್ತೆ ಮತ್ತು ಸದಸ್ಯರಾದ ಕಮರುದ್ದೀನ್ ರೆಂಜಲಾಡಿ, ಮುಸ್ತಫಾ ರೆಂಜಲಾಡಿ ಹಾಗೂ ಮುನ್ನ ಸೊರಕೆ ಸ್ಮರಣಿಕೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಕಮಲಾ ಸ್ವಾಗತಿಸಿದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಉಮಾವತಿ, ಅವಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!