ಕರಾವಳಿ

ಬಡ ವ್ಯಾಪಾರಿಯ ಗೂಡಂಗಡಿ ಧ್ವಂಸ: ಗುಬ್ಬಚ್ಚಿಗಳ ಮೇಲೆ ಬ್ರಹ್ಮಾಸ್ತ್ರ




✍️ಹೈದರ್ ಆಲಿ ಐವತ್ತೊಕ್ಲು

ಅದೆಷ್ಟೋ ರಣಹದ್ದುಗಳು,ತಿಮಿಂಗಿಲಗಳು ನಮ್ಮ ದೇಶದ ಆರ್ಥಿಕತೆಯನ್ನು ತಿಂದುತೇಗಿ ಪರಾರಿಯಾದರೂ,ತಮಗೆ ಬೇಕಾದವರ ನೂರಾರು ಅಕ್ರಮ ,ಅನಧಿಕೃತ ಕಟ್ಟಡಗಳು,ಮಾಲ್ ಗಳು,ಅಂಗಡಿಗಳು ತಲೆ ಎತ್ತಿ ರಾಜಾರೋಷದಿಂದ ತೆರಿಗೆ ವಂಚಿಸಿ ಕಾರ್ಯಾಚರಿಸುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಸರಕಾರದ ದೃಷ್ಟಿಗೆ ಬೀಳುವುದು ತಮ್ಮ ಕುಟುಂಬ ನಿರ್ವಹಣೆ ಗಾಗಿ ರಸ್ತೆ ಬದಿಯಲ್ಲಿ ,ತಳ್ಳು ಗಾಡಿಗಳಲ್ಲಿ ,ಅಂಗಡಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿರುವ ಬಡಪಾಯಿಗಳನ್ನು….

ಯಾರದೋ ಕುಮ್ಮುಕ್ಕಿನಿಂದ ಯಾವುದೇ ಮುನ್ಸೂಚನೆ ಇಲ್ಲದೆ ರಾತ್ರೋರಾತ್ರಿ ಸ್ಥಳಿಯಾಡಳಿತದಿಂದ ಜೆಸಿಬಿಗಳು ಅಂಗಡಿಗಳನ್ನು ಕೆಡವುತ್ತವೆ.ಅದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಾರೆ.ಬೆಳಿಗ್ಗೆ ವ್ಯಾಪಾರಕ್ಕಾಗಿ ಆ ಬಡವರು ಬಂದು ನೋಡಿದರೆ ಅವರ ಬದುಕಿನ ಆಸರೆಯೇ ನೆಲಸಮವಾಗಿರುತ್ತದೆ.ದಿಕ್ಕು ತೋಚದೆ ಕಂಗಾಲಾಗುತ್ತಾರೆ.

ಇಂತಹದೇ ಘಟನೆ ನಮ್ಮ ಊರಿನ ಬೆಳಂದೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.ರೋಗಿಯಾಗಿ ಮಲಗಿರುವ ತಾಯಿ ,ಅಂಗವಿಕಲ ಮಕ್ಕಳು, ಕಿತ್ತುತಿನ್ನುತ್ತಿರುವ ಬಡತನ .ದೂರದೂರಿಗೆ ಹೋಗಿ ದುಡಿಯಲಾಗದ ಕಾಯಿಮಣ ಗ್ರಾಮದ ಅಬ್ದುಲ್ ರಝಾಕ್ ಎಂಬ ಯುವಕ ಜೀವನೋಪಾಯಕ್ಕಾಗಿ ಪಂಚಾಯತ್ ನ ಅನುಮತಿಯೊಂದಿಗೆ ಕಳೆದ ಹಲವಾರು ತಿಂಗಳಿಂದ ರಸ್ತೆ ಬದಿಯಲ್ಲಿ ತಳ್ಳುಗಾಡಿಯೊಂದನ್ನು ನಿರ್ಮಿಸಿ ಸಂಜೆ ಹೊತ್ತು ಸಣ್ಣ ವ್ಯಾಪಾರ ಮಾಡುತ್ತಿದ್ದದು ಕೆಲವು ಮಂದಿಗೆ ಕಣ್ಣುಕುಕ್ಕಿತು.

ಸುತ್ತಲಿನ ಸರ್ವಧರ್ಮೀಯರಿಗೆ ಆಪ್ತನಾಗಿದ್ದ ರಝಾಕ್ ನ ಗಾಡಿಯನ್ನು ಕೆಲವರ ಕುಮ್ಮಕ್ಕಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಯವರು ಕೆಡವಿರುವುದು ಅಕ್ಷಮ್ಯ ಮತ್ತು ಅಮಾನುಷ ಕೃತ್ಯವಾಗಿದೆ.

ಬಡವರ ಹೊಟ್ಟೆಯ ಮೇಲೇ ಹೊಡೆಯುವ ಇಂತಹ ಆಡಳಿತ ವ್ಯವಸ್ಥೆ ಖಂಡನೀಯ.

ಪಂಚಾಯತ್ ವತಿಯಿಂದ ಅವರಿಗೊಂದು ಬದಲಿ ವ್ಯವಸ್ಥೆ ಕಲ್ಪಿಸಿ ಮಾನವೀಯತೆಯನ್ನು ಮೆರೆದು,ಅವರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ.
______
✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!