ಟೀಂ ಇಂಡಿಯಾ ಮಾಜಿ ಆಟಗಾರ ಇನ್ನು ಮುಂದೆ ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿ
ಟೀಂ ಇಂಡಿಯಾ ಮಾಜಿ ಆಟಗಾರ, ಇನ್ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ್ದ ಅಜಯ್ ಜಡೇಜಾ ಇದೀಗ ಐತಿಹಾಸಿಕ ರಾಜಮನೆತನದ ಉತ್ತರಾಧಿಕಾರಿಯಾಗಿದ್ದಾರೆ.
ಜಡೇಜಾ ಅವರನ್ನು ನವನಗರ (ಜಾಮ್‌ನಗರ) ದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸಲಾಗಿದೆ. ಇದು ಗುಜರಾತ್‌ನ ಗಲ್ಫ್ ಆಫ್ ಕಚ್‌ನ ದಕ್ಷಿಣ ತೀರದಲ್ಲಿರುವ ಐತಿಹಾಸಿಕ ಹಲಾರ್ ಪ್ರದೇಶದ ರಾಜಪ್ರಭುತ್ವದ ರಾಜ್ಯವಾಗಿದೆ. ಅಧಿಕೃತ ಹೇಳಿಕೆಯಲ್ಲಿ, ಈ ಘೋಷಣೆಯನ್ನು ನವನಗರದ ಮಹಾರಾಜ ಜಾಮ್ ಸಾಹೇಬ್ ಖಚಿತಪಡಿಸಿದ್ದಾರೆ. 15 ಟೆಸ್ಟ್ ಮತ್ತು 196 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.