ಅಂತಾರಾಷ್ಟ್ರೀಯಕ್ರೈಂ

ಇರಾನ್: ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಾಮೂಹಿಕ ಅಂತ್ಯಕ್ರಿಯೆ

ಟೆಹ್ರಾನ್: ಅಮೆರಿಕ-ಇಸ್ರೇಲ್‌ ನಡೆಸಿದ ದಾಳಿಯ ಮೊದಲ ದಿನವೇ 170 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದು, ಮಕ್ಕಳ ಅಂತ್ಯಕ್ರಿಯೆನ್ನು ಸಾಮೂಹಿಕವಾಗಿ ನೆರವೇರಿಸಲಾಗಿದೆ.


ಜೆಸಿಬಿಯಿಂದ ನೂರಾರು ಗುಂಡಿಗಳನ್ನು ತೋಡಲಾಗಿತ್ತು. ಅದರ ಡ್ರೋನ್‌ ದೃಶ್ಯದ ಫೋಟೊವನ್ನು ಇರಾನ್‌ ಹಂಚಿಕೊಂಡಿದೆ. ಗುಂಡಿ ಮುಂದೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದಾರೆ. ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಸೇರಿರುವುದನ್ನು ತೋರಿಸುವ ವೀಡಿಯೊವನ್ನು ಇರಾನ್ ನ ಸರಕಾರಿ ಮಾಧ್ಯಮ ಪ್ರಸಾರ ಮಾಡಿದೆ.
ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆ.28 ರಂದು ದಾಳಿ ನಡೆಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!