ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ: ಪ್ರಕರಣ ದಾಖಲು
ಮಂಗಳೂರು: ಉಳ್ಳಾಲ ಮಸೀದಿಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ವ್ಯಕ್ತಿಯೊಬ್ಬನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಹಾಸ್ ಶೆಟ್ಟಿ ಎಂಬವರ ಫೋಟೋ ಇರುವ ಇನ್‌ಸ್ಟಾಗ್ರಾಮ್ ಪೋಸ್ಟ್ ವೊಂದಕ್ಕೆ ಶಂಕರ್ 11916 ಎಂಬ ಹೆಸರಿನ ಖಾತೆದಾರ, ‘ಸಪೋರ್ಟ್ ಮಾಡಿ ಬ್ರೋ, ಉಳ್ಳಾಲ ಮಸ್ಜಿದ್ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡ್ತೀನಿ’ ಎಂದು ಕಮೆಂಟ್ ಮಾಡಿದ್ದಾನೆ. ಇದನ್ನು ಸಾಮಾಜಿಕ ಜಾಲತಾಣದ ಮಾನಿಟರಿಂಗ್ ನಿರ್ವಹಿಸುತ್ತಿರುವ
ಸಂತೋಷ್ ದೊಡ್ಡಮನಿ ಗಮನಿಸಿದ್ದು, ಅವರು ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಯು ಧರ್ಮ ಧರ್ಮಗಳ ಮಧ್ಯೆ ವೈರತ್ವ ಉಂಟುಮಾಡಿ, ಹಿಂಸೆಗೆ ಪ್ರಚೋದಿಸಿ, ಜನರನ್ನು ಎತ್ತಿಕಟ್ಟುವಂತೆ ಮಾಡುವ ಉದ್ದೇಶದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





