ಈದ್ ಮಿಲಾದ್ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ
ಪುತ್ತೂರು: ಪ್ರವಾದಿ ಮುಹಮ್ಮದ್(ಸ.ಅ)
ಜನ್ಮ ದಿನಾಚರಣೆ ಪ್ರಯುಕ್ತ ಈಶ್ವರಮಂಗಳ ತ್ವೈಬ ಎಜ್ಯುಕೇಶನ್ ಸೆಂಟರ್ ವತಿಯಿಂದ ರಿಹ್ಲತುಲ್ ವಿಸ್ವಾಲ್ ಮಿಲಾದ್ ಅಭಿಯಾನದ ಭಾಗವಾಗಿ ‘ಸ್ನೇಹ ಸ್ಪರ್ಷ’ ಎಂಬ ಯೋಜನೆಯ ಮೂಲಕ ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಯದುರಾಜ್ ಹಾಗೂ ಪ್ರಮುಖರು ಸ್ವೀಕರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಮ್ಯಾನೇಜರ್ ಕಬೀರ್ ಹಿಮಮಿ,
ಗುರುಗಳಾದ ದಾವೂದ್ ಹಿಮಮಿ, ಸ್ವಾದಿಖ್ ಹಿಮಮಿ , ಇಮ್ತಿಯಾಝ್ ಹಿಮಮಿ ಸಖಾಫಿ, ನಝೀರ್ ಬಲ್ನಾಡ್, ಇಕ್ಬಾಲ್ ಬಪ್ಪಳಿಗೆ
ದ.ಕ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯ್ಲ, ಅಬ್ದುಲ್ಲ ಕಾವು, ಆದಂ ಕುಞ್ಞಿ, ಎರುಕೊಟ್ಟೆ ಶರೀಫ್, ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು .