ಕರಾವಳಿ

ಭಕ್ತಕೋಡಿ: ರಸ್ತೆಗೆ ಉರುಳಿದ ಮರ, ಸ್ಥಳೀಯ ಯುವಕರಿಂದ ಕಾರ್ಯಾಚರಣೆ

ಪುತ್ತೂರು: ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ಭಕ್ತಕೋಡಿಯಲ್ಲಿ ಬೃಹತ್ ಗಾತ್ರದ ಮರವೊಂದು ಮುಖ್ಯ ರಸ್ತೆಗೆ ಬಿದ್ದು ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತೊಡಕುಂಟಾದ ಘಟನೆ ಜು.31ರಂದು ರಾತ್ರಿ ನಡೆದಿದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಸ್ಥಳೀಯ ಯುವಕರು ರಸ್ತೆಗೆ ಬಿದ್ದ ಮರದ ಭಾಗವನ್ನು  ಕಡಿದು ತೆರವು ಮಾಡಿದ್ದಾರೆ. ಉಳಿದ ಭಾಗವನ್ನು ಅರಣ್ಯ ಇಲಾಖೆಯವರು ಆಗಮಿಸಿ ತೆರವು ಮಾಡಿದ್ದಾರೆ.

ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್ ರಾಜ್ ಕರಂಬಾರು, ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಸದಸ್ಯರಾದ ಅಮರರಾಜ್ ಭಕ್ತಕೋಡಿ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಮಹಮ್ಮದ್ ಅಲಿ ನೇರೋಳ್ತಡ್ಕ, ಬಿ.ಎಫ್.ಸಿ ಭಕ್ತಕೋಡಿ ಇದರ ಸದಸ್ಯರಾದ ಸುಹೈಲ್ ಭಕ್ತಕೋಡಿ, ಸಿನಾನ್ ಭಕ್ತಕೋಡಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಭಕ್ತಕೋಡಿ ಪರಿಸರದಲ್ಲಿ ಇನ್ನಷ್ಟು ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಅಂತಹ ಮರಗಳನ್ನು  ಕೂಡಲೇ ತೆರವುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!