ಮಾಣಿ: ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಾಂಧವರಿಗೆ ಸಿಹಿ ಹಂಚಿದ ಹಿಂದೂ ಬಾಂಧವರು
ಬಂಟ್ವಾಳ: ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮ್ ಬಾಂಧವರಿಗೆ ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದ ಘಟನೆ ದಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಕೊಡಾಜೆಯಲ್ಲಿ ನಡೆದಿದೆ.
ಸೋಮವಾರ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸುತ್ತಿದ್ದು ವಿವಿಧ ಕಾರ್ಯಕ್ರಮ, ಜಾಥಾ ನಡೆದಿದೆ.
ಜಿಲ್ಲೆಯಲ್ಲಿ ಕೋಮು ಪ್ರಚೋದನೆ, ಹೇಳಿಕೆಗಳ
ನಡುವೆ ಮಾಣಿಯಲ್ಲಿ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸುವ ಮೂಲಕ ನಾಡಿಗೆ ಸೌಹಾರ್ದತೆಯ ಸಂದೇಶ ಸಾರಿದ್ದು ಹಿಂದೂ ಬಾಂಧವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮುಖಂಡರುಗಳಾದ ಸುಧೀರ್ ಕುಮಾರ್ ರೈ, ಬಾಲಕೃಷ್ಣ ಆಳ್ವ, ರವಿ ಚಂದ್ರ, ನಿರಂಜನ್ ರೈ, ವಿಕ್ಕಿ ಶೆಟ್ಟಿ, ಸತೀಶ್ ಪೂಜಾರಿ, ಶೀತಲ್, ಮೋಹನ್ ಪ್ರವೀಣ್ ಕರಿಂಕ, ಶರತ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.