ಕರಾವಳಿ

ಹಜ್ ಯಾತ್ರೆಗೆ ತೆರಳಲಿರುವ ಅಲಿಫ್ ಚಾರಿಟೇಬಲ್ ಟ್ರಸ್ಟ್ ಸದಸ್ಯ ಅಬ್ಬಾಸ್ ಬಾವರವರಿಗೆ ಈಡನ್ ಗ್ಲೋಬಲ್ ವಿದ್ಯಾಸಂಸ್ಥೆಯಿಂದ ಬೀಳ್ಕೊಡುಗೆ

ಪುತ್ತೂರು: ಪವಿತ್ರ ಹಜ್ ಯಾತ್ರೆ ತೆರಳಲಿರುವ ಅಲಿಫ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ಅಬ್ಬಾಸ್ ಬಾವ ನೆಕ್ಕರೆಯವರನ್ನು ಬೆಳಂದೂರು ಈಡನ್ ಗ್ಲೋಬಲ್ ವಿದ್ಯಾಸಂಸ್ಥೆಯಲ್ಲಿ ಅಲಿಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಯಾತ್ರೆಗೆ ಶುಭ ಹಾರೈಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು, ಟ್ರಸ್ಟ್ ಸದಸ್ಯರಾದ ಪುತ್ತುಬಾವ ಹಾಜಿ, ಖಾದರ್ ಹಾಜಿ, ಇಸ್ಮಾಯಿಲ್ ಹಾಜಿ, ಪ್ರಾಂಶುಪಾಲ ರಂಝಿ ಮುಹಮ್ಮದ್, ಅರೇಬಿಕ್ ವಿಭಾಗದ ಮುಖ್ಯಗುರು ನಿಝಾಮುದ್ದೀನ್ ಕಬೀರ್, ಉಸ್ತಾದರುಗಳು ಹಾಗೂ ರಝಾಕ್ ಕೆನರಾ, ಬಶೀರ್ ಸವಣೂರು ಉಪಸ್ಥಿತರಿದ್ದರು. ಅಲಿಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಶ್ರಫ್ ಶಾ, ಟ್ರಸ್ಟ್ ಸದಸ್ಯರಾದ ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ನಿಝಾರ್ ದರ್ಬೆ, ಮುಸ್ತಫಾ ಸಅದಿ ಪುತ್ತೂರು, ಮುಹಮ್ಮದ್ ಹಾಜಿ ನಡುಪದವು, ಅಶ್ರಫ್ ಕೇಕುಡೆ ಶುಭ ಹಾರೈಸಿದರು.

 

Leave a Reply

Your email address will not be published. Required fields are marked *

error: Content is protected !!