ಉಪ್ಪಿನಂಗಡಿ: ರೋಡ್ ರೋಲರ್ ಹರಿದು ಕಾರ್ಮಿಕ ಮೃತ್ಯು
ಉಪ್ಪಿನಂಗಡಿ: ರಸ್ತೆ ಕಾಮಗಾರಿಯ ವೇಳೆ ರೋಡ್ ರೋಲರ್‌ನ ಅಡಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಸಂಭವಿಸಿದೆ.

ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಕಾರ್ಮಿಕನೋರ್ವ ರೋಡ್ ರೋಲರ್ ನಿಲ್ಲಿಸಿದ್ದಲ್ಲಿ ಮಲಗಿದ್ದ ಎನ್ನಲಾಗಿದೆ. ಇದನ್ನು ಗಮನಿಸದ ಚಾಲಕ ಆತನ ಮೇಲೆ ರೋಡ್ ರೋಲರ್ ಚಲಿಸಿದ್ದು, ಸ್ಥಳದಲ್ಲೇ ಈತ ಮೃತಪಟ್ಟಿದ್ದರು.
ರೋಡ್ ರೋಲರ್ ಚಲಿಸಿದ ಪರಿಣಾಮ ವ್ಯಕ್ತಿಯ ದೇಹ ಅಪ್ಪಚ್ಚಿಯಾಗಿದೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲಕ ಕಾರ್ಮಿಕ ಎಂದು ತಿಳಿದು ಬಂದಿದೆ.




