ರಾಜ್ಯ

ಕೋವಿ ಪರವಾನಿಗೆ: ಗೃಹಸಚಿವರಿಗೆ ಪಟ್ಟಿ ಸಲ್ಲಿಸಿದ ಶಾಸಕ ಅಶೋಕ್ ರೈ



ಪುತ್ತೂರು: ಕೋವಿಪರವಾನಿಗೆ ನವೀಕರಣವಾಗದೆ ಬಾಕಿ ಇರುವವರ ಪಟ್ಟಿಯನ್ನು ರಾಜ್ಯ ಗೃಹ ಸಚಿವ ಡಾ. ಎಚ್ ಜಿ ಪರಮೇಶ್ವರ್‌ರವರಿಗೆ ಪುತ್ತೂರು ಶಾಸಕ ಅಶೋಕ್ ರೈ ಸಲ್ಲಿಸಿದ್ದು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕಿನ ಸುಮಾರು 38 ಕೃಷಿಕರ ನವೀಕರಣವಾಗಲು ಬಾಕಿ ಇರುವವರ ಪಟ್ಟಿಯನ್ನು ಸಲ್ಲಿಸಿದ್ದಾರೆ.



ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ದ ಕ ಜಿಲ್ಲೆಯಲ್ಲಿ ಕೃಷಿಕರಿಗೆ ಕೋವಿ ಅಗತ್ಯವಾಗಿದೆ. ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟು ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ಕೋವಿಯನ್ನು ನವೀಕರಣ ಮಾಡುತ್ತಿಲ್ಲ. ಈ ಬಗ್ಗೆ ಅರ್ಜಿದಾರರು ನನ್ನಲ್ಲಿ ವಿಚಾರವನ್ನು ತಿಳಿಸಿದ್ದು ಅದರಂತೆ ನವೀಕರಣಕ್ಕೆ ಅರ್ಜಿ ಹಾಕಿರುವ ವಿವಿಧ ತಾಲೂಕುಗಳ ಅರ್ಜಿದಾರರ ಪಟ್ಟಿಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದರು.

 

ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕೋವಿ ಪರವಾನಿಗೆ ನವೀಕರಣವಾಗದೇ ಇರುವ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ದ ಕ ಜಿಲ್ಲೆಯಲ್ಲಿ ಕೃಷಿಗಳಿಗೆ ಕಾಡುಪ್ರಾಣಿಗಳ ಕಾಟವಿದ್ದು ಈ ಕಾರಣಕ್ಕೆ ಕೋವಿ ಅಗತ್ಯವಾಗಿ ಬೇಕಾಗಿದೆ. ಕೋವಿ ಪರವಾನಿಗೆ ನೀಡಲು ಕಾನೂನು ಪ್ರಕಾರ ಯಾರಿಗೆ ಖಂಡಿತವಾಗಿಯೂ ಸಾದ್ಯವಿಲ್ಲವೋ ಅಂಥವರನ್ನು ಹೊರತುಪಡಿಸಿ ಉಳಿದ ಅರ್ಜಿದಾರರನ್ನು ಮಾನ್ಯ ಮಾಡಬೇಕು ಎಂದು ಅಧಿವೇಶನದಲ್ಲಿ ಶಾಸಕರು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು ಯಾರೆಲ್ಲಾ ಕೋವಿ ಪರವಾನಿಗೆಗೆ ಅರ್ಜಿ ಹಾಕಿದ್ದಾರೋ ಅಂಥವರ ಪಟ್ಟಿ ಸಲ್ಲಿಸುವಂತೆ ತಿಳಿಸಿದ್ದರು. ಆ ಪ್ರಕಾರ ಶಾಸಕರು ಅರ್ಜಿದಾರರ ಪಟ್ಟಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!