ಕ್ರೀಡೆರಾಷ್ಟ್ರೀಯ

ಮಹಿಳಾ ಟಿ20 ವಿಶ್ವಕಪ್ ಟಿಕೆಟ್ ಮಾರಾಟ ಆರಂಭ; ಟಿಕೆಟ್ ದರ ಕೇಳಿದ್ರೆ ಖಂಡಿತ ಶಾಕ್ ಆಗ್ತೀರ..!

T20 World Cup 2024: ಮಹಿಳಾ ಟಿ20 ವಿಶ್ವಕಪ್ 2024ರ ಟಿಕೆಟ್ ದರವನ್ನು ಐಸಿಸಿ ಅತ್ಯಂತ ಕಡಿಮೆ ಇರಿಸಿದೆ. ಗರಿಷ್ಠ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ಸಲುವಾಗಿ ಐಸಿಸಿ ಟಿಕೆಟ್ ದರವನ್ನು ಕೇವಲ 5 ದಿರ್ಹಮ್‌ಗಳಲ್ಲಿ ಇರಿಸಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 115 ರೂ. ಆಗಲಿದೆ.

ಇದೇ ಅಕ್ಟೋಬರ್‌ 3 ರಿಂದ ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್ಗೆ ಯುಎಇ ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಈ ಟೂರ್ನಿ ಈ ಮೊದಲು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಈ ಚುಟುಕು ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಎಲ್ಲಾ ಪಂದ್ಯಗಳು ದುಬೈ ಮತ್ತು ಶಾರ್ಜಾ ಮೈದಾನದಲ್ಲಿ ನಡೆಯಲಿವೆ. ಈ ನಡುವೆ ಈ ಚುಟುಕು ವಿಶ್ವಸಮರದ ಟಿಕೆಟ್‌ಗಳ ಮಾರಾಟವನ್ನು ಐಸಿಸಿ ಪ್ರಾರಂಭಿಸಿದೆ.

Leave a Reply

Your email address will not be published. Required fields are marked *

error: Content is protected !!