ಕರಾವಳಿ

ಅಂಗನವಾಡಿ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಪುತ್ರಿಯ ಹುಟ್ಟು ಹಬ್ಬ ಆಚರಿಸಿದ ಪತ್ರಕರ್ತ ಸಿಶೇ ಕಜೆಮಾರ್‌ ದಂಪತಿ

ಪುತ್ತೂರು: ಅಂಗನವಾಡಿ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಪತ್ರಕರ್ತ ಸಿಶೇ ಕಜೆಮಾರ್‌ರವರ ಪುತ್ರಿ ಚಾರ್ವಿ ಕಜೆಮಾರ್ ತನ್ನ 3ನೇ ವರ್ಷದ ಹುಟ್ಟು ಹಬ್ಬವನ್ನು ಆ.27ರಂದು ಆಚರಿಸಿಕೊಂಡಿದ್ದಾರೆ.

ಕುಂಬ್ರ ಅಂಗನವಾಡಿ, ಪರ್ಪುಂಜ, ತ್ಯಾಗರಾಜನಗರ ಮತ್ತು ತಿಂಗಳಾಡಿ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಚಾರ್ವಿ ಅವರ ಹುಟ್ಟು ಹಬ್ಬವನ್ನು ಕಜೆಮಾರ್-ಮಮತಾ ದಂಪತಿ ಮಾದರಿಯಾಗಿ ಆಚರಿಸುತ್ತಾ ಬಂದ್ದಿದ್ದು ಕಳೆದ ವರ್ಷ ಆಶ್ರಮಕ್ಕೆ ಊಟ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದರು. ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡುವ ಇಂದಿನ ಕಾಲಘಟ್ಟದಲ್ಲಿ ತಮ್ಮ ಮಗುವಿನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಕಜೆಮಾರ್ ದಂಪತಿ ಸಮಾಜಕ್ಕೆ ಮಾದರಿಯೆನಿಸಿದ್ದಾರೆ. ಸಿಶೇ ಕಜೆಮಾರ್ ಅವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಪತ್ನಿ ಮಮತಾ ಅವರು ಪುಣಚ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿದ್ದಾರೆ.

ಅಂಗನವಾಡಿಗಳಿಗೆ ಆಪಲ್ ವಿತರಣೆ ಸಂದರ್ಭದಲ್ಲಿ ಕುಂಬ್ರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಆಶಾ ಮಾಧವ ರೈ ಕುಂಬ್ರ, ಸಹಾಯಕಿ ರಾಜೀವಿ ಕುಂಬ್ರ, ಎಸ್.ಮಾಧವ ರೈ ಕುಂಬ್ರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಚಾರ್ವಿ ಕಜೆಮಾರ್‌ರವರ ತಾಯಿ ಮಮತಾ ಕಜೆಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!