ಕಡಬ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ-ಪ್ರಕರಣ ದಾಖಲು
ಕಡಬ: ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಸಮೀಪದ ಏನೆಕಲ್ಲು ನಿವಾಸಿ ಹರೀಶ್ ಪಿ. (60 ವ.) ರವರ ಪತ್ನಿ ವೇದಾವತಿಯವರ ಮನೆಯಲ್ಲಿ ಕೃತ್ಯ ನಡೆದಿದೆ. ಜೂ.6ರಂದು ಮಧ್ಯಾಹ್ನ ಸುಮಾರು 84 ಗ್ರಾಂ ಚಿನ್ನಾಭರಣಗಳನ್ನು ಶುಚಿಗೊಳಿಸಿ, ಮನೆಯೊಳಗಿನ ಗಾಡ್ರೇಜ್ ಲಾಕರ್ ನಲ್ಲಿ ಇರಿಸಿದ್ದು ಸೆ. 17ರಂದು ಸಂಜೆ ಹರೀಶ್ ರವರು ಪತ್ನಿಯ ಗಾಡ್ರೇಜ್ ತೆರೆದು ನೋಡಿದಾಗ ಗಾಡ್ರೇಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದು, ಚಿನ್ನಾಭರಣಗಳ ಅಂದಾಜು ಮೌಲ್ಯ 5,00,000/- ಆಗಿದೆ.
ಜೂ. 6ರಿಂದ ಸೆ. 17ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಒಳಗಿನ ಗಾಡ್ರೇಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಹರೀಶ್ ರವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.