ಹದಗೆಟ್ಟ ರಸ್ತೆ: ಪೆರಿಯಡ್ಕ IMWA ಸದಸ್ಯರಿಂದ ತಾತ್ಕಾಲಿಕ ದುರಸ್ತಿ, ಸಾರ್ವಜನಿಕರಿಂದ ಪ್ರಶಂಸೆ

ಉಪ್ಪಿನಂಗಡಿ : ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಪೆರಿಯಡ್ಕದ ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್ ಸಮಿತಿ ಸದಸ್ಯರು ಶ್ರಮಧಾನದ ಮೂಲಕ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ರಸ್ತೆ ದುರಸ್ತಿಗೊಳಿಸಿದರು.

ಈ ಸಂದರ್ಭದಲ್ಲಿ IMWA ಇದರ ಅಧ್ಯಕ್ಷ ಗಫೂರ್ ಪೆರಿಯಡ್ಕ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಮೈಸೀದ್ ಇಬ್ರಾಹೀಂ, IMWA ಸದಸ್ಯರಾದ ಆರೀಫ್ ಪೆರಿಯಡ್ಕ, ಸಂಶುದ್ದೀನ್, ಮುಸ್ತಫಾ, ಸಫೀಕ್, ನೌಷಾದ್ ಹಾಗೂ ಇತರರು ಉಪಸ್ಥಿತರಿದ್ದರು. IMWA ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.