ಕರಾವಳಿಕ್ರೈಂ

ಬ್ಯಾಂಕ್ ಕಳ್ಳತನ ಪ್ರಕರಣ ಭೇಧಿಸಿದ ಬಂಟ್ವಾಳ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡ್ ಎಸ್ ಬಿ ಐ ಬ್ಯಾಂಕಿನಲ್ಲಿ ಸೆ.4 ರಂದು ಬೆಳಿಗ್ಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 147/2024 ಕಲಂ: 303(2) ಬಿ ಎನ್ ಎಸ್ – 2023 ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದರು. ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದ ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡವು, ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ (32ವ) ಎಂಬಾತನನ್ನು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ವಶಕ್ಕೆ ಪಡೆದು, ಆರೋಪಿಯಿಂದ 80,000 ರೂ ನಗದು ಹಣವನ್ನು ಸ್ವಾಧೀನಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಅವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ವೈ.ಎಸ್.ಪಿ  ಎಸ್ ವಿಜಯಪ್ರಸಾದ್, ಡಿ ವರ ನೇತೃತ್ವದ ಹರೀಶ್ ಎಂ.ಆರ್, ಪಿ.ಎಸ್. ಐ. ಬಂಟ್ವಾಳ ಗ್ರಾಮಾಂತರ ಠಾಣೆರವರ ವಿಶೇಷ ಪತ್ತೆ ತಂಡವನ್ನು ರಚಿಸಿದ್ದು ಸದ್ರಿ ತನಿಖಾ ತಂಡದಲ್ಲಿ ಹೆಚ್ ಸಿ ಹರಿಶ್ಚಂದ್ರ, ಹೆಚ್ ಸಿ ರಾಧಾಕೃಷ್ಣ, ಪಿಸಿಗಳಾದ ಬಸವರಾಜ ಎಚ್.ಕೆ, ಕುಮಾರ್ ಎಚ್.ಕೆ, ಅಶೋಕ ಮತ್ತು ರಂಜಾನ್ ರವರುಗಳು ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!